ಜಾಗತಿಕ ಹವಾಮಾನ ಮುನ್ಸೂಚನೆಗೆ ನಾಸಾದಿಂದ ಅತ್ಯಾಧುನಿಕ ಉಪಗ್ರಹ

0
38

ಜಾಗತಿಕ ಹವಾಮಾನದ ಮೇಲೆ ನಿಗಾವಹಿಸಲು ಮತ್ತು ಮುನ್ಸೂಚನೆ ಕುರಿತು ನಿಖರ ಮಾಹಿತಿ ಪಡೆಯಲು ನಾಸಾ ಶನಿವಾರ ಅತ್ಯಾಧುನಿಕ ಉಪಗ್ರಹ ಉಡಾವಣೆ ಮಾಡಿದೆ.

ಜಾಯಿಂಟ್‌ ಪೋಲಾರ್‌ ಸ್ಯಾಟಲೈಟ್‌ ಸಿಸ್ಟಂ–1 (ಜೆಪಿಎಸ್‌ಎಸ್‌–1) ಎಂದು ಕರೆಯಲಾಗುವ ಈ ಉಪಗ್ರಹವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (ಎನ್‌ಒಎಎ) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಪ್ರತಿ ದಿನ ಎರಡು ಬಾರಿ ವಿಜ್ಞಾನಿಗಳಿಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಈ ಉಪಗ್ರಹ ಮಾಹಿತಿ ನೀಡಲಿದೆ ಎಂದು ನಾಸಾ ತಿಳಿಸಿದೆ.

’ಜೆಪಿಎಸ್‌ಎಸ್–1’ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿದೆ. ಭೂಮಿ ಮತ್ತು ಸಮುದ್ರದಲ್ಲಿನ ತಾಪಮಾನ, ಜ್ವಾಲಾಮುಖಿ, ಚಂಡಮಾರುತದ ತೀವ್ರತೆ ಮತ್ತಿತರ ಅಂಶಗಳ ಕುರಿತ ಮಾಹಿತಿಯನ್ನು ಉಪಗ್ರಹ ರವಾನಿಸಲಿದೆ.

‘ಕ್ಯೂಬ್‌ಸ್ಯಾಟ್ಸ್‌’ ಎಂದು ಕರೆಯಲಾಗುವ ಸಣ್ಣ ಉಪಗ್ರಹಗಳ ಉಡಾವಣೆಗೂ ನಾಸಾ ಸಿದ್ಧತೆ ನಡೆಸಿದೆ. ನಾಸಾದ ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಈ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿದೆ.

ಈ ’ಕ್ಯೂಬ್‌ಸ್ಯಾಟ್‌’ಗಳು ಅಮೆರಿಕದ ನಾಲ್ಕು ವಿಶ್ವವಿದ್ಯಾಲಯಗಳಿಗೆ ಸಂಬಂಧ ಪಟ್ಟಿದ್ದು, ಶೀಘ್ರದಲ್ಲೇ ಕಕ್ಷೆಗೆ ಸೇರಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.