ಜಾಗತಿಕ ವಿಮಾನಯಾನದಲ್ಲಿ ಭಾರತಕ್ಕೆ ಮೂರನೇ ಸ್ಥಾನ

0
520

ವಿಮಾನಯಾನವನ್ನು ಅವಲಂಬಿಸಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಐಎಟಿಎ) ತಿಳಿಸಿದೆ. ಪ್ರಯಾಣಕ್ಕೆ ವಿಮಾನವನ್ನು ಯಾವ ದೇಶದಲ್ಲಿ ಎಷ್ಟು ಜನರು ಬಳಸುತ್ತಾರೆ ಎಂಬುದರ ಬಗ್ಗೆ ಗುರುವಾರ ಐಎಟಿಎ ವರದಿ ಬಿಡುಗಡೆ ಮಾಡಿದೆ.

ನವದೆಹಲಿ: ವಿಮಾನಯಾನವನ್ನು ಅವಲಂಬಿಸಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಐಎಟಿಎ) ತಿಳಿಸಿದೆ. ಪ್ರಯಾಣಕ್ಕೆ ವಿಮಾನವನ್ನು ಯಾವ ದೇಶದಲ್ಲಿ ಎಷ್ಟು ಜನರು ಬಳಸುತ್ತಾರೆ ಎಂಬುದರ ಬಗ್ಗೆ ಸೆಪ್ಟೆಂಬರ್ 6 ರ ಗುರುವಾರ ಐಎಟಿಎ ವರದಿ ಬಿಡುಗಡೆ ಮಾಡಿದೆ.

ಈ ವರದಿ ಪ್ರಕಾರ ಜಗತ್ತಿನಾದ್ಯಂತ ಒಟ್ಟೂ 400 ಕೋಟಿ ಜನ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಾಯುಮಾರ್ಗದಲ್ಲಿ ಸಂಚಾರ ಮಾಡುತ್ತಾರೆ. ಅದರಲ್ಲಿ ಅಮೆರಿಕನ್ನರು 63.2 ಕೋಟಿ, ಚೀನಾದ 55.5 ಕೋಟಿ ಮತ್ತು ಭಾರತದ 16.1 ಕೋಟಿ ಜನಸಂಖ್ಯೆ ವಿಮಾನದಲ್ಲಿ ಸಂಚಾರ ಮಾಡುತ್ತಾರೆ. ನಂತರ ಯುಕೆ(14.7) ಮತ್ತು ಜರ್ಮನಿ (11.4) ಸ್ಥಾನ ಪಡೆದಿವೆ.

ಕಳೆದ 47 ತಿಂಗಳುಗಳಲ್ಲಿ ಭಾರತದಲ್ಲಿ ದೇಶೀಯ ವಿಮಾನಯಾನದ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಜಾಗತಿಕ ವಿಮಾನ ಸಂಸ್ಥೆ ಸೆಪ್ಟೆಂಬರ್ 7 ರ ಶುಕ್ರವಾರ ಹೇಳಿದೆ. ಭಾರತದ ದೇಶೀಯ ವಿಮಾನ ಯಾನ ಪ್ರಯಾಣಿಕರ ಪ್ರಮಾಣ ಅಳೆಯುವ ಆರ್​ಪಿಕೆ (ರೆವಿನ್ಯೂ ಪ್ಯಾಸೆಂಜರ್​ ಕಿಲೋಮೀಟರ್​) ಯು ಆಸ್ಟ್ರೇಲಿಯಾ, ಬ್ರೆಜಿಲ್​, ಚೀನಾ, ಜಪಾನ್​, ರಷ್ಯಾ, ಯುಎಸ್​ಗಳಿಗಿಂತ ಅಧಿಕವಾಗಿದೆ ಎಂದು ಐಎಟಿಎ ತಿಳಿಸಿದೆ.