ಜಾಗತಿಕ ಕುಬೇರರ ಪಟ್ಟಿ 13 ನೇ ಸ್ಥಾನಕ್ಕೆ ಮುಕೇಶ್‌ ಬಡ್ತಿ

0
580

ಭಾರತದ ಅತ್ಯಂತ ಸಿರಿವಂತ ಉದ್ಯಮಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಡೆಯ ಮುಕೇಶ್‌ ಅಂಬಾನಿ ಅವರು, ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದ ಈ ವರ್ಷದ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಬಡ್ತಿ ಪಡೆದು 13 ನೇ ಸ್ಥಾನಕ್ಕೆ ಏರಿದ್ದಾರೆ.

ನ್ಯೂಯಾರ್ಕ್‌ (ಪಿಟಿಐ): ಭಾರತದ ಅತ್ಯಂತ ಸಿರಿವಂತ ಉದ್ಯಮಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಡೆಯ ಮುಕೇಶ್‌ ಅಂಬಾನಿ ಅವರು, ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದ ಈ ವರ್ಷದ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಬಡ್ತಿ ಪಡೆದು 13 ನೇ ಸ್ಥಾನಕ್ಕೆ ಏರಿದ್ದಾರೆ.

ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ಸ್ಥಾಪಕ ಜೆಫ್‌ ಬೆಜೊಸ್‌ (55) ತಮ್ಮ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.  9.71 ಲಕ್ಷ ಕೋಟಿ ಸಂಪತ್ತಿನ ಒಡೆಯರಾಗಿರುವ ಬೆಜೊಸ್‌, ಬಿಲ್‌ ಗೇಟ್ಸ್‌ ಮತ್ತು ವಾರನ್‌ ಬಫೆಟ್‌ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.

ಮುಕೇಶ್‌ ಅಂಬಾನಿ (61) ಅವರ ಸಂಪತ್ತು ವರ್ಷದ ಹಿಂದೆ 2.80 ಲಕ್ಷ ಕೋಟಿಗಳಷ್ಟಿತ್ತು. ಈಗ  3.50 ಲಕ್ಷ ಕೋಟಿಗೆ ಏರಿಕೆಯಾಗಿದೆ. ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 19ನೆ ಸ್ಥಾನದಲ್ಲಿದ್ದ ಅವರು ಈಗ 13 ನೇ ಸ್ಥಾನಕ್ಕೆ ಏರಿದ್ದಾರೆ.