ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ 100 ವರ್ಷ

0
554

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆದು ಈ ಶನಿವಾರಕ್ಕೆ 100 ವರ್ಷಗಳು. 1919ರ ಏಪ್ರಿಲ್‌ 13ರಂದು ನಡೆದ ಈ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಪ್ರಮುಖ ಅಧ್ಯಾಯ. ದೇಶಕ್ಕಾಗಿ ಮಡಿದವರ ಸ್ಮರಣೆಗಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಾಕಿಕೊಂಡಿದೆ.

ನವದೆಹಲಿ: ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆದು ಈ ಏಪ್ರೀಲ್ 13 ರ ಶನಿವಾರಕ್ಕೆ 100 ವರ್ಷಗಳು. 1919ರ ಏಪ್ರಿಲ್‌ 13ರಂದು ನಡೆದ ಈ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಪ್ರಮುಖ ಅಧ್ಯಾಯ. ದೇಶಕ್ಕಾಗಿ ಮಡಿದವರ ಸ್ಮರಣೆಗಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಾಕಿಕೊಂಡಿದೆ.

ಅಮೃತಸರದ ಜಲಿಯನ್‌ ವಾಲಾಬಾಗ್‌ನಲ್ಲಿನ ಸ್ಮಾರಕವನ್ನು ನವೀಕರಣಗೊಳಿಸಿ, ಅಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಂಗೀತ ಕಾರಂಜಿ ಅಲ್ಲದೆ, ನೆರಳು–ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ಹತ್ಯಾಕಾಂಡದಲ್ಲಿ ದೇಶಕ್ಕಾಗಿ ಪ್ರಾಣಬಿಟ್ಟವರ ನೆನಪಿಗಾಗಿ ನಾಣ್ಯಗಳು, ಅಂಚಚೀಟಿಗಳನ್ನು ಹೊರ ತಂದಿರುವ ಸರ್ಕಾರ,ಸ್ಮಾರಕದ ಸುತ್ತಲೂ  ಕವಿ ಸಮ್ಮೇಳನಗಳು, ವಸ್ತುಪ್ರದರ್ಶನ, ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ.

ಕ್ಷಮೆ ಕೇಳಲಿ:ಹತ್ಯಾಕಾಂಡದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಬ್ರಿಟನ್‌ ಸರ್ಕಾರ ಕ್ಷಮೆ ಕೇಳಬೇಕು ಎಂದು ಪಾಕಿಸ್ತಾನ ಸರ್ಕಾರ ಒತ್ತಾಯಿಸಿದೆ. 

‘ಬ್ರಿಟನ್‌ ಸರ್ಕಾರ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಕ್ಷಮೆಯಾಚಿಸಬೇಕು ಮತ್ತು ಲಾಹೋರ್‌ ಮ್ಯೂಸಿಯಂನಿಂದ ತೆಗೆದುಕೊಂಡುವ ಹೋಗಿರುವ ಕೊಹಿನೂರ್‌ ವಜ್ರವನ್ನು ಹಿಂತಿರುಗಿಸಬೇಕು’ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌಧರಿ ಟ್ವೀಟ್‌ ಮಾಡಿದ್ದರು. 

ವಿಷಾದ:ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಇತ್ತೀಚೆಗೆ ವಿಷಾದ ವ್ಯಕ್ತಪಡಿಸಿದರು. ಆದರೆ, ಘಟನೆಗೆ ಸಂಬಂಧಿಸಿದಂತೆ ಅವರು ಕ್ಷಮೆಯಾಚಿಸಲಿಲ್ಲ.

‘ಹತ್ಯಾಕಾಂಡಕ್ಕೆ ಕಾರಣವಾದ ಬ್ರಿಟನ್, ಭಾರತದ ಕ್ಷಮೆಯಾಚಿಸಬೇಕು’ ಎಂದು ಬ್ರಿಟನ್‌ನ ವಿರೋಧ ಪಕ್ಷದ ನಾಯಕ ಜೆರೆಮಿ ಕಾರ್ಬಿನ್‌ ಕೂಡ ಒತ್ತಾಯಿಸಿದ್ದರು.