ಜಮ್ಮು ಕಾಶ್ಮೀರದಲ್ಲಿ ಬಿಜೆಪಿ- ಪಿಡಿಪಿ ಮೈತ್ರಿ ಅಂತ್ಯ

0
23

ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಮತ್ತು ಜಮ್ಮು ಕಾಶ್ಮೀರದ ಕ್ಷಿಪ್ರ ಅಭಿವೃದ್ದಿಗಾಗಿ ನಾವು ಪಿಡಿಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ್ದೆವು. ಆದರೆ ಇನ್ನು ಮುಂದೆ ನಾವು ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಮುಂದುವರಿಸುವುದಿಲ್ಲ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ- ಪಿಡಿಪಿ ಮೈತ್ರಿ ಅಂತ್ಯಗೊಂಡಿದೆ. ಪಿಡಿಪಿ ಸರ್ಕಾರದೊಂದಿಗಿನ ಮೈತ್ರಿ ಅಂತ್ಯಗೊಳಿಸಿರುವ ವಿಷಯವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಮ್ಮು ಕಾಶ್ಮೀರದ ಬಿಜೆಪಿ ಶಾಸಕರು ಮತ್ತು ಅಮಿತ್ ಶಾ ಜತೆ ದೆಹಲಿಯಲ್ಲಿ ಸಭೆ ನಡೆಸಿದ ನಂತರ ಬಿಜೆಪಿ ಈ ತೀರ್ಮಾನ ಕೈಗೊಂಡಿದೆ.

ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಮತ್ತು ಜಮ್ಮು ಕಾಶ್ಮೀರದ ಕ್ಷಿಪ್ರ ಅಭಿವೃದ್ದಿಗಾಗಿ ನಾವು ಪಿಡಿಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ್ದೆವು. ಆದರೆ ಇನ್ನು ಮುಂದೆ ನಾವು ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಮುಂದುವರಿಸುವುದಿಲ್ಲ. ನಾವು ಮೈತ್ರಿ ಸರ್ಕಾರದಿಂದ ಹೊರಬರುವ ತೀರ್ಮಾನ ತೆಗೆದುಕೊಂಡಿದ್ದೇವೆ.

 

ದೇಶದ ಅವಿಭಾಜ್ಯ ಅಂಗ ಆಗಿರುವ ಕಾಶ್ಮೀರದ ಜನರ ಆಶಯಗಳಿಗೆ ಸ್ಪಂದಿಸುವುದರ ಜತೆಗೆ ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ಬಿಜೆಪಿ ಒತ್ತಾಯಿಸುತ್ತಿದೆ. ನಾವು ಪಿಡಿಪಿ ಸರ್ಕಾರದ ಉದ್ದೇಶಗಳನ್ನು ಪ್ರಶ್ನಿಸುತ್ತಿಲ್ಲ ಆದರೆ ಪ್ರಸ್ತುತ ಸರ್ಕಾರ ಕಾಶ್ಮೀರ ಕಣಿವೆಯಲ್ಲಿ ಮಾಡಬೇಕಿದ್ದ ಉದ್ದೇಶಿತ ಕಾರ್ಯಗಳನ್ನು ಪೂರೈಸಲು ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಧವ್ ಹೇಳಿದ್ದಾರೆ.