ಜಗತ್ತಿನ ಸಿರಿವಂತ ತಾಣವಾಗುವತ್ತ ಮಕಾವ್ ಹೆಜ್ಜೆ

0
19

ಜಗತ್ತಿನ ಸಿರಿವಂತ ತಾಣಗಳ ಪಟ್ಟಿಯಿಂದ ಕತಾರ್‌ ಹಿಂದೆ ಸರಿಯುತ್ತಿದ್ದು, ಅದರ ಸ್ಥಾನವನ್ನು ಆಕ್ರಮಿಸಿಕೊಳ್ಳುವತ್ತ ಚೀನಾದ ಮಕಾವ್ ಹೆಜ್ಜೆಯಿಡುತ್ತಿದೆ.

ಹೊಸದಿಲ್ಲಿ: ಜಗತ್ತಿನ ಸಿರಿವಂತ ತಾಣಗಳ ಪಟ್ಟಿಯಿಂದ ಕತಾರ್‌ ಹಿಂದೆ ಸರಿಯುತ್ತಿದ್ದು, ಅದರ ಸ್ಥಾನವನ್ನು ಆಕ್ರಮಿಸಿಕೊಳ್ಳುವತ್ತ ಚೀನಾದ ಮಕಾವ್ ಹೆಜ್ಜೆಯಿಡುತ್ತಿದೆ. 

2020ರ ವೇಳೆಗೆ ಐಎಂಎಫ್ ಅಂದಾಜಿನ ಪ್ರಕಾರ ಮಕಾವ್‌ನ ಪ್ರತಿ ವ್ಯಕ್ತಿಯ ಆದಾಯ 143,116 ಡಾಲರ್‌ (ಅಂದಾಜು 98.8 ಲಕ್ಷ ರೂ.) ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ. 

ಚೀನಾದ ಸುಪರ್ದಿಗೆ ಪೋರ್ಚುಗಲ್‌ನಿಂದ ಎರಡು ದಶಕಗಳ ಹಿಂದೆ ಮಕಾವ್ ಮರಳಿದ್ದು, ಶೀಘ್ರಗತಿಯ ಆರ್ಥಿಕ ಬೆಳವಣಿಗೆ ದಾಖಲಿಸುವ ಜತೆಗೆ ಎಲ್ಲ ರೀತಿಯ ಅಭಿವೃದ್ಧಿಯನ್ನೂ ಹೊಂದಿದೆ. ಮಕಾವ್‌ನಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ವ್ಯವಸ್ಥಿತವಾದ ಮತ್ತು ಕಾನೂನುಬದ್ಧ ಕ್ಯಾಸಿನೋ ಉದ್ಯಮವಿದ್ದು, ಅತ್ಯಂತ ಹೆಚ್ಚು ಆದಾಯ ತರುತ್ತಿದೆ. 

ಪ್ರಸ್ತುತ ಕತಾರ್‌ ಅತ್ಯಂತ ಹೆಚ್ಚು ಆದಾಯ ಹೊಂದಿರುವ ನಗರವಾಗಿದ್ದು, ಶೀಘ್ರದಲ್ಲೇ ಆ ಸ್ಥಾನವನ್ನು ಮಕಾವ್ ತಲುಪಲಿದೆ. ಜನರ ತಲಾ ಆದಾಯ ಏರಿಕೆಯ ಜತೆಗೆ ಸರಕಾರಕ್ಕೂ ಅತ್ಯಧಿಕ ಪ್ರಮಾಣದಲ್ಲಿ ಆದಾಯ ದೊರೆಯುತ್ತಿದೆ. 

ಕತಾರ್‌ ಮತ್ತು ಮಕಾವ್ ಮಧ್ಯೆ ಪ್ರಸ್ತುತ ಆದಾಯ ಮಿತಿಯಲ್ಲಿ ಸ್ಪರ್ಧೆ ಇದ್ದು, ಜಿಡಿಪಿ ಏರಿಕೆಯ ಜತೆಗೆ ತಲಾ ಆದಾಯದಲ್ಲೂ ಏರಿಕೆಯಾಗಿ ಎರಡೂ ನಗರಗಳ ಮಧ್ಯದ ಅಂತರ ಕಡಿಮೆಯಾಗುತ್ತಿದೆ. 

ಕತಾರ್ ಬೆಳವಣಿಗೆ ಸ್ಥಿರವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಸಿರಿವಂತ ನಗರದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ನಂತರ ಸ್ಥಾನದಲ್ಲಿ ಲುಕ್ಸಂಬರ್ಗ್‌, ಐರ್ಲೆಂಡ್ ಮತ್ತು ನಾರ್ವೆ ಇದೆ.