ಜಗತ್ತಿನ ವಲಸಿಗರಲ್ಲಿ ಭಾರತೀಯರೇ ಫಸ್ಟ್! : ‘ಇಂಟರ್​ನ್ಯಾಷನಲ್ ಮೈಗ್ರೆಂಟ್ ಸ್ಟಾಕ್ 2019’ ವರದಿ

0
28

ವಿಶ್ವಸಂಸ್ಥೆಯ ಜಾಗತಿಕ ವಲಸಿಗರ ಪಟ್ಟಿಯಲ್ಲಿ ಭಾರತೀಯರಿಗೆ ಅಗ್ರಸ್ಥಾನ ಸಿಕ್ಕಿದೆ. ಜಗತ್ತಿನಾದ್ಯಂತ ಇರುವ 27.2 ಕೋಟಿ ವಲಸಿಗರಲ್ಲಿ ಭಾರತೀಯರ ಸಂಖ್ಯೆ 1.75 ಕೋಟಿ ಮೀರಿದೆ ಎಂದು ‘ಇಂಟರ್​ನ್ಯಾಷನಲ್ ಮೈಗ್ರೆಂಟ್ ಸ್ಟಾಕ್ 2019’ ವರದಿಯಲ್ಲಿ ಉಲ್ಲೇಖವಾಗಿದೆ.

ವಾಷಿಂಗ್ಟನ್: ವಿಶ್ವಸಂಸ್ಥೆಯ ಜಾಗತಿಕ ವಲಸಿಗರ ಪಟ್ಟಿಯಲ್ಲಿ ಭಾರತೀಯರಿಗೆ ಅಗ್ರಸ್ಥಾನ ಸಿಕ್ಕಿದೆ. ಜಗತ್ತಿನಾದ್ಯಂತ ಇರುವ 27.2 ಕೋಟಿ ವಲಸಿಗರಲ್ಲಿ ಭಾರತೀಯರ ಸಂಖ್ಯೆ 1.75 ಕೋಟಿ ಮೀರಿದೆ ಎಂದು ‘ಇಂಟರ್​ನ್ಯಾಷನಲ್ ಮೈಗ್ರೆಂಟ್ ಸ್ಟಾಕ್ 2019’ ವರದಿಯಲ್ಲಿ ಉಲ್ಲೇಖವಾಗಿದೆ.

ರಾಷ್ಟ್ರಗಳ ಅಧಿಕೃತ ಸಮೀಕ್ಷೆ ಆಧರಿಸಿ ವಿದೇಶಿ ಮೂಲವನ್ನು ಗುರುತಿಸಲಾಗಿದ್ದು, ಇದರಲ್ಲಿ ವ್ಯಕ್ತಿಯ ವಯಸ್ಸು, ಲಿಂಗ ಮತ್ತು ಮೂಲ ಯಾವುದು ಎನ್ನುವ ಬಗ್ಗೆ ಉಲ್ಲೇಖಿಸಲಾಗಿದೆ. 10 ರಾಷ್ಟ್ರಗಳಿಂದ ವಲಸೆ ತೆರಳಿರುವವರ ಪ್ರಮಾಣ ಒಟ್ಟು ವಲಸಿಗರ ಮೂರನೇ ಒಂದು ಭಾಗದಷ್ಟಾಗುತ್ತದೆ ಎಂದು ವರದಿ ಹೇಳಿದೆ.

2019ರ ವರದಿಯಲ್ಲಿ ಉಲ್ಲೇಖಿಸಿರುವಂತೆ ಭಾರತದಿಂದ ಒಟ್ಟು 1.75 ಕೋಟಿ ಜನರು ವಲಸೆ ಹೋಗಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ ಇದ್ದು, ಇಲ್ಲಿಂದ 1.18 ಕೋಟಿ ಜನ ವಲಸಿಗರಿದ್ದಾರೆ. ಉಳಿದಂತೆ ಚೀನಾದಿಂದ 1.07 ಕೋಟಿ, ರಷ್ಯಾದಿಂದ 1.05 ಕೋಟಿ, ಸಿರಿಯಾದಿಂದ 82 ಲಕ್ಷ, ಬಾಂಗ್ಲಾದೇಶದಿಂದ 78 ಲಕ್ಷ, ಪಾಕಿಸ್ತಾನದಿಂದ 63 ಲಕ್ಷ, ಉಕ್ರೇನ್​ನಿಂದ 59 ಲಕ್ಷ, ಫಿಲಿಪ್ಪೀನ್ಸ್​ನಿಂದ 54 ಲಕ್ಷ ಮತ್ತು ಅಫ್ಘಾನಿಸ್ತಾನದಿಂದ 51 ಲಕ್ಷ ಜನರು ವಲಸೆ ಹೋಗಿದ್ದಾರೆ.

ಭಾರತದಲ್ಲಿದ್ದಾರೆ 51 ಲಕ್ಷ ವಲಸಿಗರು

ಬೇರೆ ದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವವರ ಪ್ರಮಾಣ 51 ಲಕ್ಷ ಎಂಬುದು ಮತ್ತೊಂದು ಅಚ್ಚರಿ. 2015ರಲ್ಲಿ 52 ಲಕ್ಷ ವಲಸಿಗರಿದ್ದರು. ಈಗ ವಲಸಿಗರ ಪ್ರಮಾಣ ಸ್ವಲ್ಪ ಕುಸಿದಿದೆ. 2015ರಲ್ಲಿ ಅಂತಾರಾಷ್ಟ್ರೀಯ ವಲಸಿಗರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಭಾರತಕ್ಕೆ ಬಂದಿರುವ ವಲಸಿಗರ ಪ್ರಮಾಣ ಶೇ.0.4ರಷ್ಟಿದೆ. ಭಾರತದಲ್ಲಿ ಒಟ್ಟು 2.07 ಲಕ್ಷ ನಿರಾಶ್ರಿತರಿದ್ದಾರೆ. ಭಾರತದಲ್ಲಿರುವ ವಲಸಿಗರ ಪೈಕಿ ಮಹಿಳೆಯರ ಪ್ರಮಾಣ ಶೇ.48.8ರಷ್ಟಿದ್ದರೆ, ವಲಸಿಗರ ಸರಾಸರಿ ವಯಸ್ಸು 47.1 ವರ್ಷಗಳಾಗಿವೆ. ಭಾರತಕ್ಕೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳದಿಂದ ಹೆಚ್ಚಿನ ಸಂಖ್ಯೆಯ ವಲಸಿಗರು ಆಗಮಿಸಿದ್ದಾರೆ.

ಯುರೋಪ್ ನೆಚ್ಚಿನ ತಾಣ

ಯುರೋಪ್ 8.2ಕೋಟಿ ವಲಸಿಗರಿಗೆ ಆಶ್ರಯ ನೀಡಿದೆ. ಉತ್ತರ ಅಮೆರಿಕದಲ್ಲಿ 5.9 ಕೋಟಿ, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದಲ್ಲಿ ತಲಾ 4.9 ಕೋಟಿ ವಲಸಿಗರಿದ್ದಾರೆ. ದೇಶಗಳನ್ನಾಧರಿಸಿ ನೋಡುವುದಾದರೆ ಒಟ್ಟು ವಲಸಿಗರಲ್ಲಿ ಅರ್ಧದಷ್ಟು ಜನರು 10 ದೇಶಗಳಲ್ಲೇ ಹೆಚ್ಚು ನೆಲೆಸಿದ್ದಾರೆ. ಅಮೆರಿಕ ಇದರಲ್ಲಿ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಒಟ್ಟು 5.1 ಕೋಟಿ ವಲಸಿಗರಿದ್ದಾರೆ. ಜರ್ಮನಿ ಮತ್ತು ಸೌದಿ ಅರೇಬಿಯಾ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಇಲ್ಲಿ ತಲಾ 1.3 ಕೋಟಿ ವಲಸಿಗರಿದ್ದಾರೆ. ನಂತರದ ಸ್ಥಾನದಲ್ಲಿ ರಷ್ಯಾ(1.2 ಕೋಟಿ) ಬ್ರಿಟನ್(1.0 ಕೋಟಿ), ಅರಬ್ ಸಂಯುಕ್ತ ರಾಷ್ಟ್ರ(90 ಲಕ್ಷ) ಫ್ರಾನ್ಸ್, ಕೆನಡಾ ಮತ್ತು ಆಸ್ಟ್ರೇಲಿಯ ತಲಾ(80 ಲಕ್ಷ) ಮತ್ತು ಇಟಲಿ (60 ಲಕ್ಷ) ಜನರಿಗೆ ಆಶ್ರಯ ನೀಡಿದೆ.

# ಮೆಕ್ಸಿಕೋಗೆ 2, ಚೀನಾಗೆ ಮೂರನೇ ಸ್ಥಾನ

# 2.07 ಲಕ್ಷ – ಭಾರತದಲ್ಲಿರುವ ನಿರಾಶ್ರಿತರು

# 47.1-ಭಾರತದಲ್ಲಿ ಇರುವ ವಲಸಿಗರ ಸರಾಸರಿ ವಯಸ್ಸು