ಚೊಚ್ಚಲ ‘ದ್ವಿಶತಕ’ ಸಿಡಿಸಿದ ಹಿಟ್‍ಮನ್ ರೋಹಿತ್ ಶರ್ಮಾ!

0
6

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಅವರು ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದರು.

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಅವರು ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದರು.

ಇಲ್ಲಿನ ಜೆಎಸ್‍ಸಿಎ ಕ್ರೀಡಾಂಗಣದಲ್ಲಿ ಎರಡನೇ ದಿನವಾದ  ಇಂದು 117 ರನ್ ಗಳಿಂದ  ಬ್ಯಾಟಿಂಗ್ ಮುಂದುವರಿಸಿದ ಹಿಟ್‍ಮನ್ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಬೆಂಡೆತ್ತಿದರು. 

255 ಎಸೆತಗಳನ್ನು ಎದುರಿಸಿದ ಅವರು ಆರು ಸಿಕ್ಸರ್ ಹಾಗೂ 28 ಬೌಂಡರಿಯೊಂದಿಗೆ 212 ರನ್ ಗಳಿಸಿ ಟೆಸ್ಟ್ ವೃತ್ತಿ ಜೀವನದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ನೆರೆದಿದ್ದ ಅಪಾರ ಅಭಿಮಾನಿಗಳ ಪ್ರೀತಿಗೆ ಭಾಜನರಾದರು.
 
ಮಧ್ಯಾಹ್ನ ಭೋಜನ ಮುಗಿಸಿಕೊಂಡು ಕ್ರೀಸ್‍ಗೆ ಬಂದ ರೋಹಿತ್ ಶರ್ಮಾ 86ನೇ ಓವರ್ ಮೆಡಿನ್ ಕೊಟ್ಟರು. ನಂತರ, ಲುಂಗಿ ಎನ್ ಗಿಡಿ ಓವರ್ ನ ಮೊದಲನೇ ಎಸೆತವನ್ನೂ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಸಿಡಿಸಿ ದ್ವಿಶತಕ ಸಂಭ್ರಮ ಆಚರಿಸಿದರು. ನಂತರ ಅವರು ಕಗಿಸೋ ರಬಾಡ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.