ಚುನಾವಣಾ ಪ್ರಚಾರದ ದೇಣಿಗೆ ವಾಪಸ್‌: ದಕ್ಷಿಣ ಆಫ್ರಿಕಾ ಅಧ್ಯಕ್ಷ :ಸಿರಿಲ್‌

0
453

ಚುನಾವಣಾ ಪ್ರಚಾರಕ್ಕೆ ₹25.12 ಲಕ್ಷ (5 ಲಕ್ಷ ರ‍್ಯಾಂಡ್‌) ದೇಣಿಗೆ ನೀಡಿದ ಸಂಸ್ಥೆ ಜೊತೆಗೆ ಮಗ ನಿಕಟ ಸಂಪರ್ಕ ಹೊಂದಿರುವುದನ್ನು ಒಪ‍್ಪಿಕೊಂಡಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮ್‌ಫೋಸಾ ಅವರು ಈ ಮೊತ್ತವನ್ನು ಹಿಂತಿರುಗಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋಹಾನ್ಸ್‌ಬರ್ಗ್‌ (ಎಎಫ್‌ಪಿ): ಚುನಾವಣಾ ಪ್ರಚಾರಕ್ಕೆ 25.12 ಲಕ್ಷ (5 ಲಕ್ಷ ರ‍್ಯಾಂಡ್‌) ದೇಣಿಗೆ ನೀಡಿದ ಸಂಸ್ಥೆ ಜೊತೆಗೆ ಮಗ ನಿಕಟ ಸಂಪರ್ಕ ಹೊಂದಿರುವುದನ್ನು ಒಪ‍್ಪಿಕೊಂಡಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮ್‌ಫೋಸಾ ಅವರು ಈ ಮೊತ್ತವನ್ನು ಹಿಂತಿರುಗಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಭ್ರಷ್ಟಾಚಾರ ಪ್ರಕರಣಗಳಿಗೆ ಸಿಲುಕಿದ ಕಾರಣ ಹಿಂದಿನ ಅಧ್ಯಕ್ಷ ಜಾಕೋಬ್‌ ಜುಮಾ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕಿತ್ತೊಗೆಯಲಾಗಿತ್ತು. ಇದೀಗ ಸಿರಿಲ್‌ ವಿರುದ್ಧವೂ ಸ್ವಹಿತಾಸಕ್ತಿಯ ಆರೋಪ ಕೇಳಿಬಂದಿದೆ.

 ‘ಮಗ ಆಂಡೈಲ್‌ ಕೆಲಸ ಮಾಡುತ್ತಿದ್ದ ‘ಬೊಸಾಸಾ’ ಕಂಪನಿಯು ಸರ್ಕಾರದ ಸಂಸ್ಥೆಗಳಿಂದ ಹಲವು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಇದೇ ಸಂಸ್ಥೆಯು 2017ರಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿತ್ತು’ ಎಂದು ರಾಮ್‌ಫೋಸಾ ಅವರು ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದರು.

‘ರಾಮ್‌ಫೋಸಾ ಗಮನಕ್ಕೆ ಬಾರದೇ, ದೇಣಿಗೆ ಸ್ವೀಕರಿಸಲಾಗಿತ್ತು’ ಎಂದು ಪ‍ಕ್ಷದ ನಾಯಕ ಝಿಜಿ ತಿಳಿಸಿದ್ದಾರೆ.