ಚೀನಾ: 2 ಉಪಗ್ರಹ ಉಡಾವಣೆ

0
346

ಚೀನಾ ತನ್ನ ಬೀಡೊ ದಿಕ್ಸೂಚಿ ವ್ಯವಸ್ಥೆಗೆ (ಬಿಡಿಎಸ್) ಇನ್ನೆರಡು ಉಪಗ್ರಹಗಳನ್ನು ಸೇರ್ಪಡೆ ಮಾಡಿದೆ. ಸಿಚುವಾನ್ ಪ್ರಾಂತ್ಯದಲ್ಲಿರುವ ಷಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಸೋಮವಾರ ರಾತ್ರಿ ಲಾಂಗ್ ಮಾರ್ಚ್‌ 3ಬಿ ರಾಕೆಟ್‌ ಮೂಲಕ ಎರಡೂ ಉಪಗ್ರಹಗಳನ್ನು ಉಡಾಯಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಬೀಜಿಂಗ್ (ಪಿಟಿಐ): ಚೀನಾ ತನ್ನ ಬೀಡೊ ದಿಕ್ಸೂಚಿ ವ್ಯವಸ್ಥೆಗೆ (ಬಿಡಿಎಸ್) ಇನ್ನೆರಡು ಉಪಗ್ರಹಗಳನ್ನು ಸೇರ್ಪಡೆ ಮಾಡಿದೆ. 

ಸಿಚುವಾನ್ ಪ್ರಾಂತ್ಯದಲ್ಲಿರುವ ಷಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಸೋಮವಾರ ರಾತ್ರಿ ಲಾಂಗ್ ಮಾರ್ಚ್‌ 3ಬಿ ರಾಕೆಟ್‌ ಮೂಲಕ ಎರಡೂ ಉಪಗ್ರಹಗಳನ್ನು ಉಡಾಯಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಈಗಾಗಲೇ ಬಾಹ್ಯಾಕಾಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಡಿಎಸ್‌–3 ಸಮೂಹದ 17 ಉಪಗ್ರಹಗಳ ಸಾಲಿಗೆ ಇವೂ ಸೇರಿಕೊಳ್ಳಲಿವೆ.

‘ಒಂದು ಗಡಿ– ಒಂದು ರಸ್ತೆ ಸಹಭಾಗಿತ್ವ ಹೊಂದಿರುವ ರಾಷ್ಟ್ರಗಳಿಗೆ ಈ ವರ್ಷಾಂತ್ಯದ ವೇಳೆಗೆ ದಿಕ್ಸೂಚಿ ಸೌಲಭ್ಯ ಒದಗಿಸಲು ಚೀನಾ ಯೋಜನೆ ರೂಪಿಸಿಕೊಂಡಿದೆ. ಈ ದಿಕ್ಸೂಚಿ ಸೌಲಭ್ಯ 2020ರಲ್ಲಿ ಜಾಗತಿಕ ಮಟ್ಟಕ್ಕೆ ವಿಸ್ತರಣೆಯಾಗಲಿದೆ. ಈ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಸುದ್ದಿಸಂಸ್ಥೆ ಉಲ್ಲೇಖಿಸಿದೆ.

 ಜಾಗತಿಕ ದಿಕ್ಸೂಚಿ ಸೌಲಭ್ಯಗಳಾಗಿರುವ ಅಮೆರಿಕದ ‘ಜಿಪಿಎಸ್‌’, ರಷ್ಯಾದ ‘ಗ್ಲೊನಾಸ್‌’ ಹಾಗೂ ಯುರೋಪ್‌ನ ‘ಯೂನಿಯನ್ಸ್ ಗೆಲಿಲಿಯೊ’ ನಂತರದಲ್ಲಿ ಚೀನಾದ ಬಿಡಿಎಸ್‌ ನಾಲ್ಕನೇ ಜಾಗತಿಕ ದಿಕ್ಸೂಚಿ ವ್ಯವಸ್ಥೆಯಾಗಲಿದೆ.

ಭಾರತ ಸಹ ‘ನಾವಿಕ್’ ಹೆಸರಿನಲ್ಲಿ ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ (ಐಆರ್‌
ಎನ್‌ಎಸ್‌ಎಸ್) ದಿಕ್ಸೂಚಿ ಸೌಲಭ್ಯ ರೂಪಿಸುತ್ತಿದೆ.