“ಚೀನಾ ಬಂದರು” ಬಳಕೆಗೆ “ನೇಪಾಳ”ಕ್ಕೆ ಅವಕಾಶ

0
600

ತನ್ನ ಪ್ರಮುಖ ನಾಲ್ಕು ಬಂದರುಗಳನ್ನು ಬಳಸಲು ನೇಪಾಳಕ್ಕೆ ಚೀನಾ ಅನುಮತಿ ನೀಡಿದೆ. ವ್ಯಾಪಾರಕ್ಕಾಗಿ ಬಂದರು ಬಳಸಲು ಅನುಮತಿ ನೀಡಬೇಕು ಎಂದು ನೇಪಾಳ ಮಾಡಿದ್ದ ಮನವಿಗೆ ಸಮ್ಮತಿ ನೀಡುವ ಮೂಲಕ ಭಾರತಕ್ಕೆ ಚೀನಾ ಸೆಡ್ಡು ಹೊಡೆದಿದೆ.

ಬೀಜಿಂಗ್:ನ್ನ ಪ್ರಮುಖ ನಾಲ್ಕು ಬಂದರುಗಳನ್ನು ಬಳಸಲು ನೇಪಾಳಕ್ಕೆ ಚೀನಾ ಅನುಮತಿ ನೀಡಿದೆ. ವ್ಯಾಪಾರಕ್ಕಾಗಿ ಬಂದರು ಬಳಸಲು ಅನುಮತಿ ನೀಡಬೇಕು ಎಂದು ನೇಪಾಳ ಮಾಡಿದ್ದ ಮನವಿಗೆ ಸಮ್ಮತಿ ನೀಡುವ ಮೂಲಕ ಭಾರತಕ್ಕೆ ಚೀನಾ ಸೆಡ್ಡು ಹೊಡೆದಿದೆ. ಇಂಧನ ಮತ್ತಿತರ ಪ್ರಮುಖ ವಸ್ತುಗಳ ಪೂರೈಕೆಗೆ ನೇಪಾಳ ಹೆಚ್ಚಾಗಿ ಭಾರತದ ಬಂದರುಗಳನ್ನು ಅವಲಂಬಿಸಿದೆ. 2015 ಮತ್ತು 2016ರಲ್ಲಿ ಗಡಿ ಮೂಲಕ ವ್ಯಾಪಾರಕ್ಕೆ ಭಾರತ ಬ್ರೇಕ್ ಹಾಕಿದ ಕಾರಣ ನೇಪಾಳದಲ್ಲಿ ಇಂಧನ, ಔಷಧಕ್ಕೆ ತೀವ್ರ ಕೊರತೆ ಉಂಟಾಗಿತ್ತು. ಈ ಪರಿಸ್ಥಿತಿ ಮರುನಿರ್ವಣ ಆಗದಂತೆ ಪರ್ಯಾಯ ವ್ಯಾಪಾರ ಮಾರ್ಗಗಳನ್ನು ಅನ್ವೇಷಿಸುತ್ತಿದ್ದ ನೇಪಾಳಕ್ಕೆ ಈಗ ಚೀನಾ ನೆರವು ನೀಡಲು ಮುಂದೆ ಬಂದಿದೆ.

ಟಿಟಿಎ ಒಪ್ಪಂದ

ಚೀನಾದ ಪ್ರಮುಖ ಬಂದರುಗಳಾದ ಟಿಯಾನ್​ಜಿನ್, ಶೇನ್​ರೆೆನ್ , ಲಿಯಾನ್​ಯುುಂಗಾಂಗ್ ಮತ್ತು ಝಾಂಜಿಯಾಂಗ್ ಬಳಸಲು ನೇಪಾಳ ಸರ್ಕಾರಕ್ಕೆ ಅನುಮತಿ ಸಿಕ್ಕಿದೆ. ಟ್ರಾನ್ಸಿಟ್ ಮತ್ತು ಟ್ರಾನ್ಸ್​ಪೋರ್ಟ್ ಒಪ್ಪಂದ (ಟಿಟಿಎ) ಅನ್ವಯ ಉಭಯ ದೇಶಗಳು ಪಾಲಿಸಬೇಕಾದ ನಿಯಮಗಳ ಅಂತಿಮ ಪಟ್ಟಿ ಸಿದ್ಧವಾಗಿದೆ ಎಂದು ನೇಪಾಳದ ವಾಣಿಜ್ಯ ಸಚಿವಾಲಯ ಹೇಳಿದೆ.

ನೇಪಾಳಕ್ಕೆ ಅನುಕೂಲ

ಚೀನಾ ಬಂದರುಗಳನ್ನು ತಲುಪಲು ನೇಪಾಳದ ವ್ಯಾಪಾರಸ್ಥರು ರೈಲು ಅಥವಾ ರಸ್ತೆ ಮಾರ್ಗಗಳನ್ನು ಬಳಸಬಹುದಾಗಿದೆ.

ಜಪಾನ್, ದಕ್ಷಿಣ ಕೊರಿಯಾ, ಉತ್ತರ ಏಷ್ಯಾ ದೇಶಗಳೊಂದಿಗೆ ವ್ಯಾಪಾರ ಸಂಬಂಧಕ್ಕೆ ಅನುಕೂಲ

ಟಿಬೆಟ್​ನ ಕ್ಷಿಗಾಟ್ಸೆ ಮೂಲಕ ನೇಪಾಳದ ಸರಕುಗಳು ಟ್ರಕ್ ಮೂಲಕ ಚೀನಾ ಬಂದರುಗಳನ್ನು ತಲುಪಬಹುದು. ಮಾರ್ಗದಲ್ಲಿ ಆರು ಚೆಕ್ ಪಾಯಿಂಟ್ ಸ್ಥಾಪನೆ.