ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ : ಮೊಮೊಟಾ ಚಾಂಪಿಯನ್‌

0
362

ವೃತ್ತಿಬದುಕಿನ ಶ್ರೇಷ್ಠ ಲಯದಲ್ಲಿರುವ ವಿಶ್ವದ ನಂ.1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ, ಇಲ್ಲಿ ಭಾನುವಾರವ ಮುಕ್ತಾಯಗೊಂಡ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ.

ಶಾಂಘೈ : ವೃತ್ತಿಬದುಕಿನ ಶ್ರೇಷ್ಠ ಲಯದಲ್ಲಿರುವ ವಿಶ್ವದ ನಂ.1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ, ಇಲ್ಲಿ ಭಾನುವಾರವ ಮುಕ್ತಾಯಗೊಂಡ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. 

ಭಾನುವಾರ ನಡೆದ ಹೈ ವೋಲ್ಟೇಜ್‌ ಪಂದ್ಯದಲ್ಲಿ ಒತ್ತಡ ನಿಭಾಯಿಸಿದ 24 ವರ್ಷದ ಮೊಮೊಟಾ, 66 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ  21-13, 11-21, 21-16 ಗೇಮ್‌ಗಳಿಂದ ತೈವಾನ್‌ನ ಆಟಗಾರ ಹಾಗೂ ನಾಲ್ಕನೇ ಶ್ರೇಯಾಂಕಿತ ಚೋವ್‌ ತೈನ್‌ ಚೆನ್‌ ಅವರನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದರು. 

ಪ್ರಸಕ್ತ ಸಾಲಿನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಮೊಮೊಟಾ ವಿಶ್ವ ಚಾಂಪಿಯನ್‌ಷಿಪ್‌, ಏಷ್ಯಾ ಚಾಂಪಿಯನ್‌ಷಿಪ್‌ ಮತ್ತು ವಿಶ್ವ ಟೂರ್‌ ಸ್ಪರ್ಧೆಯಲ್ಲಿ 4ನೇ ಪ್ರಶಸ್ತಿ ಮುಡಿಗೇರಿಸಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ. 

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಚೀನಾದ ಚೆನ್‌ ಯೂಫಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ ಪಂದ್ಯದಲ್ಲಿ 21-10, 21-16 ಅಂತರದ ಗೇಮ್‌ಗಳಿಂದ ಜಪಾನ್‌ನ ಆಟಗಾರ್ತಿ ನಜೋಮಿ ಒಕುಹರಾಗೆ ಸೋಲುಣಿಸಿದರು.