ಚೀನಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿ ಕ್ವಾರ್ಟರ್​ ಫೈನಲ್​ಗೆ ತಲುಪಿದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್​

0
340

ಭಾರತದ ಸ್ಟಾರ್​ ಷಟ್ಲರ್​ಗಳಾದ ಪಿ.ವಿ.ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ದ್ವಿತೀಯ ಸುತ್ತಿನಲ್ಲಿ ವಿಜೇತರಾಗಿ ಕ್ವಾರ್ಟರ್ ಫೈನಲ್​ಗೆ ತಲುಪಿದ್ದಾರೆ.

ಫುಜೊವ್ (ಚೀನಾ): ಭಾರತದ ಸ್ಟಾರ್​ ಷಟ್ಲರ್​ಗಳಾದ ಪಿ.ವಿ.ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ದ್ವಿತೀಯ ಸುತ್ತಿನಲ್ಲಿ ವಿಜೇತರಾಗಿ ಕ್ವಾರ್ಟರ್ ಫೈನಲ್​ಗೆ ತಲುಪಿದ್ದಾರೆ.

ಪಿ.ವಿ. ಸಿಂಧು ಎರಡನೇ ಸುತ್ತಿನಲ್ಲಿ ಥಾಯ್ಲೆಂಡ್​ನ ಭೂಷಣನ್‌ ಒಂಗ್‌ಬುಮೃಗಪನ್‌ ವಿರುದ್ಧ 21-12, 21-15 ರಿಂದ ಗೆಲವು ಸಾಧಿಸಿದ್ದಾರೆ.
ಪ್ರಾರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಸಿಂಧು ಎದುರಾಳಿಗೆ ಸರಿಸಮಾನವಾಗಿ ಆಟವಾಡಿದರು. ಕಠಿಣವಾಗಿದ್ದರೂ ಮೊದಲ ಆಟದಲ್ಲಿ 21-12ರಿಂದ ಗೆಲುವು ಸಾಧಿಸಿದರು. ಎರಡನೇ ಆಟದಲ್ಲಿ 37 ನಿಮಿಷದಲ್ಲಿ 21-15ರಿಂದ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟರು.

ಇನ್ನು ಪುರುಷರ ಸಿಂಗಲ್ಸ್​ನಲ್ಲಿ ಕಿಡಂಬಿ ಶ್ರೀಕಾಂತ್​ ಅವರು ಇಂಡೋನೇಷ್ಯಾದ ಟಾಮಿ ಸುಗಿಯಾರ್ತೆಯವರ ವಿರುದ್ಧ ಗೆದ್ದು ಕ್ವಾರ್ಟರ್​ ಫೈನಲ್​ಗೆ ಏರಿದ್ದಾರೆ. ಮೊದಲ ಪಂದ್ಯದಲ್ಲಿ 10-21ರಿಂದ ಟಾಮಿ ವಿರುದ್ಧ ಸೋಲೊಪ್ಪಿಕೊಂಡ ಅವರು ಎರಡನೇ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದಲ್ಲದೆ ಪ್ರಾಬಲ್ಯದ ಪ್ರದರ್ಶನ ತೋರಿ 21-9ರಿಂದ ಗೆಲುವು ಸಾಧಿಸಿದರು. ಇನ್ನು ಮೂರನೇ ಪಂದ್ಯದಲ್ಲೂ ಅದೃಷ್ಟ ಶ್ರೀಕಾಂತ ಪರ ಇತ್ತು. ಮತ್ತೆ 21-9ರಿಂದ ಜಯ ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟರು.