ಚೀನಾದ ಶಾಂಘೈನಲ್ಲಿ 5ಜಿ ಸೇವೆಗೆ ಚಾಲನೆ

0
644

ಚೀನಾದ ಶಾಂಘೈನಲ್ಲಿ ಮೊಬೈಲ್‌ನ ಐದನೇ ತಲೆಮಾರಿನ ತಂತ್ರಜ್ಞಾನ (5ಜಿ) ಮತ್ತು ಬ್ರಾಡ್‌ಬ್ಯಾಂಡ್‌ ಗಿಗಾಬೈಟ್‌ ನೆಟ್‌ವರ್ಕ್‌ ಸೇವೆಗೆ ಮಾರ್ಚ್ 30 ರ ಶನಿವಾರ ಅಧಿಕೃತ ಚಾಲನೆ ದೊರೆತಿದೆ.

ಬೀಜಿಂಗ್‌ (ಪಿಟಿಐ):  ಚೀನಾದ ಶಾಂಘೈನಲ್ಲಿ ಮೊಬೈಲ್‌ನ ಐದನೇ ತಲೆಮಾರಿನ ತಂತ್ರಜ್ಞಾನ (5ಜಿ) ಮತ್ತು ಬ್ರಾಡ್‌ಬ್ಯಾಂಡ್‌ ಗಿಗಾಬೈಟ್‌ ನೆಟ್‌ವರ್ಕ್‌ ಸೇವೆಗೆ ಮಾರ್ಚ್ 30 ರ ಶನಿವಾರ ಅಧಿಕೃತ ಚಾಲನೆ ದೊರೆತಿದೆ. 

ಈ ಸೇವೆ ಹೊಂದಿರುವ ವಿಶ್ವದ ಮೊದಲ ಜಿಲ್ಲೆ ಎಂದು ಶಾಂಘೈ ಹೇಳಿಕೊಂಡಿರುವುದಾಗಿ ಚೀನಾ ಡೈಲಿ ವರದಿ ಮಾಡಿದೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಚೀನಾ ಮೊಬೈಲ್‌, ಶಾಂಘೈನಲ್ಲಿ 5ಜಿ ಸೇವೆ ಆರಂಭಿಸಿತು. ಶಾಂಘೈನ ಉಪ ಮೇಯರ್‌ ವೂ ಕ್ವಿಂಗ್‌ ಅವರು ಮೊದಲ 5ಜಿ ವಿಡಿಯೊ ಕಾಲ್‌ ಮಾಡುವ ಮೂಲಕ ಸೇವೆಗೆ ಚಾಲನೆ ನೀಡಿದ್ದಾರೆ.