ಚೀನಾದ “ಲೀಯು ಹಾಂಗ್” ವಿಶ್ವದಾಖಲೆ

0
675

ಚೀನಾದ ಲೀಯು ಹಾಂಗ್ ಮಾರ್ಚ್ 9 ರ ಶನಿವಾರ ಇಲ್ಲಿ ನಡೆದ ಚೈನೀಸ್ ರೇಸ್ ವಾಕ್‌ ಗ್ರ್ಯಾನ್‌ ಪ್ರೀ ಮಹಿಳೆಯರ ವಿಭಾಗದ 50 ಕಿ.ಮೀ ನಡಿಗೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು.

ಬೀಜಿಂಗ್ (ಎಎಫ್‌ಪಿ): ಚೀನಾದ ಲೀಯು ಹಾಂಗ್  ಮಾರ್ಚ್ 9 ರ  ಶನಿವಾರ ಇಲ್ಲಿ ನಡೆದ ಚೈನೀಸ್ ರೇಸ್ ವಾಕ್‌ ಗ್ರ್ಯಾನ್‌ ಪ್ರೀ ಮಹಿಳೆಯರ ವಿಭಾಗದ  50 ಕಿ.ಮೀ ನಡಿಗೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು. 

ಹೋದ ಎರಡು ವರ್ಷಗಳಿಂದ ಅವರು ಪ್ರಸೂತಿ ರಜೆಯಲ್ಲಿದ್ದರು. ಸುದೀರ್ಘ ವಿಶ್ರಾಂತಿಯ ನಂತರ ಸ್ಪರ್ಧಿಸಿದ ರೇಸ್ ಇದಾಗಿದೆ.  ಹಾಂಗ ಶಾನ್ ಸಿಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಲಿಯು ಹಾಂಗ್ ಅವರು ಮೂರು ತಾಸು, 59 ನಿಮಿಷ, 15 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.  ನಾಲ್ಕು ತಾಸುಗಳೊಳಗೆ ಈ ಗುರಿ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳೆ ಅವರಾಗಿದ್ದಾರೆ ಎಂದು ಕ್ಸಿನುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

31 ವರ್ಷದ ಹಾಂಗ್ ಅವರು  ಈ ರೇಸ್‌ನಲ್ಲಿ ಲಿ ಮಕಾವ್ ಮತ್ತು ಮಾ ಫೇಯಿಂಗ್ ಅವರ ಸ್ಪರ್ಧೆಯನ್ನು ಮೀರಿ ನಿಂತರು.

ಹಾಂಗ್ ಅವರು 2016ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 20 ಕಿ.ಮೀ ರೇಸ್‌ ವಾಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಎರಡು ಬಾರಿ ವಿಶ್ವ ಚಾಂಪಿಯನ್ ಕೂಡಾ ಆಗಿದ್ದಾರೆ.

2015ರಲ್ಲಿ ಅವರು 20 ಕಿ.ಮೀ. ನಡಿಗೆಯಲ್ಲಿ (1 ಗಂಟೆ, 24ನಿಮಿಷ, 38ಸೆಕೆಂಡು) ಅವರು ವಿಶ್ವದಾಖಲೆ ಬರೆದಿದ್ದರು.