ಚೀನಾದ ಕ್ಷಿಪಣಿ ಜನಕ ಈಗ ರಕ್ಷಣಾ ಸಚಿವ

0
19

ಚೀನಾ ಕ್ಷಿಪಣಿ ಘಟಕದ ಮಾಜಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ವೀ ಫೆಂಗ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ. ಚೀನಾದ ಸಂಸತ್ ’ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌’ ಫೆಂಗ್‌ ಅವರನ್ನು ಈ ಹುದ್ದೆಗೆ ನೇಮಿಸಿದೆ.

ಚೀನಾದ ಸಂಸತ್ ’ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌’(ಎನ್‌ಪಿಸಿ) ಫೆಂಗ್‌ ಅವರನ್ನು ಈ ಹುದ್ದೆಗೆ ನೇಮಿಸಿದೆ

ಫೆಂಗ್‌ ಅವರು ಅಧ್ಯಕ್ಷ ಷಿ ಜಿನ್‌ಪಿಂಗ್‌ ಆಪ್ತರಾಗಿದ್ದಾರೆ. ಫೆಂಗ್‌ ಅವರು ತಮ್ಮ 16ನೇ ವಯಸ್ಸಿನಲ್ಲೇ ಸೇನೆಗೆ ಸೇರಿದ್ದರು. ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ರಾಕೆಟ್‌ ಎಂಜಿನಿಯರಿಂಗ್‌ ಕುರಿತ ಅಧ್ಯಯನಕ್ಕಾಗಿ ಫೆಂಗ್‌ ಅವರನ್ನು ರಾಷ್ಟ್ರೀಯ ರಕ್ಷಣೆ ಕುರಿತಾದ ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕಾ ಆಯೋಗದ ಕ್ಷಿಪಣಿ ಶಾಲೆಗೆ ಕಳುಹಿಸಲಾಯಿತು. ನಂತರ ಸೇನೆಯಲ್ಲಿ ಕ್ಷಿಪಣಿಗಳ ಸೇರ್ಪಡೆ ಕುರಿತ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಷಿ ಅವರಿಗೆ ನಿಷ್ಠೆ ವ್ಯಕ್ತಪಡಿಸಿದ್ದ  ಹಿರಿಯ ಸೇನಾ ಅಧಿಕಾರಿಗಳಲ್ಲಿ ಫೆಂಗ್‌ ಮೊದಲಿಗರಾಗಿದ್ದರು. ಜತೆಗೆ ಸೇನೆಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಫೆಂಗ್‌, ಷಿ ಅವರಿಗೆ ಪ್ರಮುಖ ಸಲಹೆಗಾರರಾಗಿದ್ದರು.

ಚೀನಾದಲ್ಲಿ ಷಿ ಮುಖ್ಯಸ್ಥರಾಗಿರುವ ಕೇಂದ್ರೀಯ ಸೇನಾ ಆಯೋಗದ(ಸಿಎಂಸಿ) ಅಡಿಯಲ್ಲಿ ಸೇನೆಯು ಕಾರ್ಯನಿರ್ವಹಿಸುತ್ತದೆ. ಷಿ ಅವರಿಗೆ ಆಪ್ತರಾಗಿರುವ ಇಬ್ಬರು ಜನರಲ್‌ಗಳಾದ ಷು ಕ್ವಿಲಿಯಾಂಗ್‌ ಮತ್ತು ಝಾಂಗ್‌ ಯೌಕ್ಸಿಯಾ ಅವರನ್ನು ಸಿಎಂಸಿ ಉಪಾಧ್ಯಕ್ಷರನ್ನಾಗಿ ಸಂಸತ್‌ ಭಾನುವಾರ ನೇಮಿಸಿತ್ತು.