ಚಿನ್ನದ ಬಾಂಡ್‌: ಗ್ರಾಂಗೆ ₹ 3,214 ನಿಗದಿ

0
448

2019 ಜನೇವರಿ 14 ರ ಸೋಮವಾರದಿಂದ ಖರೀದಿಗೆ ಲಭ್ಯವಾಗಲಿರುವ ಚಿನ್ನದ ಬಾಂಡ್‌ಗಳ (ಎಸ್‌ಜಿಬಿ) ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಗ್ರಾಂಗೆ ₹ 3,214ರಂತೆ ನಿಗದಿಪಡಿಸಿದೆ.

ನವದೆಹಲಿ (ಪಿಟಿಐ): 2019 ಜನೇವರಿ 14 ರ  ಸೋಮವಾರದಿಂದ ಖರೀದಿಗೆ ಲಭ್ಯವಾಗಲಿರುವ ಚಿನ್ನದ ಬಾಂಡ್‌ಗಳ (ಎಸ್‌ಜಿಬಿ) ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಗ್ರಾಂಗೆ 3,214ರಂತೆ ನಿಗದಿಪಡಿಸಿದೆ.

2018–19ರ ಐದನೇ ಕಂತಿನ ಚಿನ್ನದ ಬಾಂಡ್‌ ಖರೀದಿ ಅವಧಿ ಜನವರಿ 14ರಿಂದ 18ರವರೆಗೆ ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಆನ್‌ಲೈನ್‌ನಲ್ಲಿ ಖರೀದಿಸುವವರು ಮತ್ತು ನಗದುರಹಿತ (ಡಿಜಿಟಲ್‌) ರೂಪದಲ್ಲಿ ಪಾವತಿಸುವವರಿಗೆ ಬಾಂಡ್‌ನ ನೀಡಿಕೆ ಬೆಲೆಯಲ್ಲಿ ಪ್ರತಿ ಗ್ರಾಂಗೆ  50ರಂತೆ ಕಡಿತ ನೀಡಲು ಆರ್‌ಬಿಐ ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.