ಚಿನ್ನದ ಆಮದು ಇಳಿಕೆ

0
531

ದೇಶದ ಚಿನ್ನದ ಆಮದು ಪ್ರಮಾಣವು ಏಪ್ರಿಲ್‌–ಜನವರಿ ಅವಧಿಯಲ್ಲಿ ಶೇ 5ರಷ್ಟು ಕಡಿಮೆಯಾಗಿ ₹ 1.91 ಲಕ್ಷ ಕೋಟಿಗೆ ತಲುಪಿದೆ.

ನವದೆಹಲಿ (ಪಿಟಿಐ): ದೇಶದ ಚಿನ್ನದ ಆಮದು ಪ್ರಮಾಣವು ಏಪ್ರಿಲ್‌–ಜನವರಿ ಅವಧಿಯಲ್ಲಿ ಶೇ 5ರಷ್ಟು ಕಡಿಮೆಯಾಗಿ 1.91 ಲಕ್ಷ ಕೋಟಿಗೆ ತಲುಪಿದೆ.

2017–18ರಲ್ಲಿ  2 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದೆ. ಹೀಗಾಗಿ ಆಮದು ಪ್ರಮಾಣ ತಗ್ಗಿರಬಹುದು ಎಂದು ಉದ್ಯಮ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ನಕಾರಾತ್ಮಕ ಪ್ರಗತಿ ಕಂಡಿದ್ದ ಚಿನ್ನದ ಆಮದು, 2019ರ ಜನವರಿಯಲ್ಲಿ ಶೇ 38.16ರಷ್ಟು ಹೆಚ್ಚಾಗಿತ್ತು.  ಚಿನ್ನದ ಆಮದು ಕಡಿಮೆ ಆಗಿರುವುದರಿಂದ ಹರಳು ಮತ್ತು ಚಿನ್ನಾಭರಣ ರಫ್ತು ಶೇ 4 ರಷ್ಟು ಇಳಿಕೆಯಾಗಿದೆ.

ಚಿನ್ನದ ಆಮದು ನಿಯಂತ್ರಿಸಲು ಸರ್ಕಾರ ಚಿನ್ನದ ಆಮದು ಮೇಲೆ ಶೇ 10ರಷ್ಟು ಸುಂಕ ಹೇರಿದೆ. ಆದರೆ, ಚಿನ್ನಾಭರಣ ರಫ್ತಿಗೆ ಉತ್ತೇಜನ ನೀಡಲು ಸುಂಕ ತಗ್ಗಿಸಬೇಕು ಎನ್ನುವುದು ಉದ್ಯಮ ವಲಯದ ಒತ್ತಾಯವಾಗಿದೆ.