ಚಾನೆಲ್‌ಗಳ ಆಯ್ಕೆ ಅವಧಿ ವಿಸ್ತರಣೆ : ಟ್ರಾಯ್

0
331

ಕೇಬಲ್‌ ಮತ್ತು ಡಿಟಿಎಚ್‌ ಸಂಪರ್ಕ ಹೊಂದಿರುವ ಗ್ರಾಹಕರು ತಮಗಿಷ್ಟವಾದ ಚಾನೆಲ್‌
ಗಳನ್ನು ಆಯ್ಕೆ ಮಾಡಿಕೊಳ್ಳಲು ನೀಡಿದ್ದ ಅವಧಿಯನ್ನು ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ. ಅಲ್ಲದೇ, ಪ್ಲಾನ್‌ಅನ್ನು ಈ ಅವಧಿಯಲ್ಲಿ ಉಚಿತವಾಗಿಯೇ ಬದಲಾಯಿಸಬಹುದು.

ನವದೆಹಲಿ (ಪಿಟಿಐ): ಕೇಬಲ್‌ ಮತ್ತು ಡಿಟಿಎಚ್‌ ಸಂಪರ್ಕ ಹೊಂದಿರುವ ಗ್ರಾಹಕರು ತಮಗಿಷ್ಟವಾದ ಚಾನೆಲ್‌
ಗಳನ್ನು ಆಯ್ಕೆ ಮಾಡಿಕೊಳ್ಳಲು ನೀಡಿದ್ದ ಅವಧಿಯನ್ನು 2019 ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ. ಅಲ್ಲದೇ, ಪ್ಲಾನ್‌ಅನ್ನು ಈ ಅವಧಿಯಲ್ಲಿ ಉಚಿತವಾಗಿಯೇ ಬದಲಾಯಿಸಬಹುದು.

ಪ್ರಸ್ತುತ ಪ್ಲಾನ್‌ನಿಂದ ನೂತನ ನಿಯಮಾವಳಿಯಡಿ ‘ಅತ್ಯುತ್ತಮ ಪ್ಲಾನ್‌’ ಆಯ್ಕೆ ಮಾಡಿಕೊಳ್ಳುವ ಅವಧಿಯಲ್ಲಿ ಟಿ.ವಿ ವೀಕ್ಷಕರಿಗೆ ಮಾಸಿಕ ಶುಲ್ಕಕ್ಕಿಂತ ಹೆಚ್ಚು ಶುಲ್ಕವನ್ನು ವಿಧಿಸಬಾರದು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಕಾರ್ಯದರ್ಶಿ ಎಸ್.ಕೆ.ಗುಪ್ತಾ ಬುಧವಾರ ತಿಳಿಸಿದ್ದಾರೆ.

‘ಗ್ರಾಹಕರು ಇಷ್ಟಪಡುವ ಚಾನೆಲ್‌ ಅಥವಾ ಪ್ಲಾನ್‌ ಅನ್ನು 72 ಗಂಟೆ ಒಳಗೆ ಒದಗಿಸುವಂತೆ ಡಿಪಿಒಗಳಿಗೆ (ಡಿಸ್ಟ್ರಿಬ್ಯುಶನ್‌ ಪ್ಲಾಟ್‌ಫಾರ್ಮ್ ಓನರ್ಸ್‌) ಸೂಚಿಸಲಾ
ಗಿದೆ’ ಎಂದು ಅವರು ತಿಳಿಸಿದ್ದಾರೆ.