“ಚಾಚಾ”ಗೆ ವಿಶ್ವದ ಕ್ರೀಡಾಭಿಮಾನಿ ಗೌರವ ಪ್ರಶಸ್ತಿ

0
19

ಸುಮಾರು 50 ವರ್ಷಗಳಿಂದ ತಮ್ಮ ದೇಶದ ಕ್ರಿಕೆಟ್‌ ತಂಡವನ್ನು ಹುರಿದುಂಬಿಸುತ್ತಿರುವ ಪಾಕಿಸ್ತಾನ ಅಭಿಮಾನಿಯೊಬ್ಬರಿಗೆ ‘ವಿಶ್ವದ ಕ್ರೀಡಾ ಅಭಿಮಾನಿ’ ಪ್ರಶಸ್ತಿ ಸಂದಿದೆ. ಚೌಧರಿ ಅಬ್ದುಲ್ ಜಲೀಲ್‌ ಹೆಚ್ಚಾಗಿ ‘ಚಾಚಾ–ಎ–ಕ್ರಿಕೆಟ್‌’ ಎಂದೇ ಜನಪ್ರಿಯರಾಗಿರುವ ವ್ಯಕ್ತಿಯೇ ಈ ಗೌರವಕ್ಕೆ ಪಾತ್ರರಾದ ಪಾಕಿಸ್ತಾನದ ಕಟ್ಟಾ ಅಭಿಮಾನಿ. ‘ಇಂಟರ್‌ನ್ಯಾಷನಲ್‌ ದಿ ನ್ಯೂಸ್‌’ ಸುದ್ದಿ ಸಂಸ್ಥೆ ಈ ಕುರಿತು ಮಾಹಿತಿ ನೀಡಿದೆ.

ಮ್ಯಾಂಚೆಸ್ಟರ್‌: ಸುಮಾರು 50 ವರ್ಷಗಳಿಂದ ತಮ್ಮ ದೇಶದ ಕ್ರಿಕೆಟ್‌ ತಂಡವನ್ನು ಹುರಿದುಂಬಿಸುತ್ತಿರುವ ಪಾಕಿಸ್ತಾನ ಅಭಿಮಾನಿಯೊಬ್ಬರಿಗೆ ‘ವಿಶ್ವದ ಕ್ರೀಡಾ ಅಭಿಮಾನಿ’ ಪ್ರಶಸ್ತಿ ಸಂದಿದೆ. ಚೌಧರಿ ಅಬ್ದುಲ್ ಜಲೀಲ್‌ ಹೆಚ್ಚಾಗಿ ‘ಚಾಚಾ–ಎ–ಕ್ರಿಕೆಟ್‌’ ಎಂದೇ ಜನಪ್ರಿಯರಾಗಿರುವ ವ್ಯಕ್ತಿಯೇ ಈ ಗೌರವಕ್ಕೆ ಪಾತ್ರರಾದ ಪಾಕಿಸ್ತಾನದ ಕಟ್ಟಾ ಅಭಿಮಾನಿ. ‘ಇಂಟರ್‌ನ್ಯಾಷನಲ್‌ ದಿ ನ್ಯೂಸ್‌’ ಸುದ್ದಿ ಸಂಸ್ಥೆ ಈ ಕುರಿತು ಮಾಹಿತಿ ನೀಡಿದೆ.

ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಯಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಜೂನ್‌ 14ರಂದು ನಡೆಯಲಿರುವ ಭಾರತ–ಪಾಕಿಸ್ತಾನ ಪಂದ್ಯಕ್ಕೂ ಎರಡು ದಿನ ಮುಂಚೆ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ನಾಲ್ಕು ಬೇರೆ ಬೇರೆ ದೇಶಗಳ ಕಟ್ಟಾ ಅಭಿಮಾನಿಗಳೊಂದಿಗೆ ಚೌಧರಿ ಅಬ್ದುಲ್‌ ಜಲೀಲ್‌ ಅವರಿಗೆ ಸಾಂಪ್ರದಾಯಿಕ ಪಾಕಿಸ್ತಾನಿ ಅಭಿಮಾನಿ ಎಂಬ ಗೌರವ ಸಂದಿದೆ.

ಪ್ರಶಸ್ತಿ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಜಲೀಲ್‌ ‘ಐದು ದಶಕಗಳ ಅಭಿಮಾನವನ್ನು ವಿಶ್ವ ಮಟ್ಟದಲ್ಲಿ ಗುರು ತಿಸಲಾಗಿದೆ. ಇದು ನನಗೆ ಹೆಮ್ಮೆ ತಂದ ಕ್ಷಣ’ ಎಂದಿದ್ದಾರೆ. ಸಿಯಾಲ್‌ಕೋಟ್‌ ಮೂಲದ ಚಾಚಾ 1969ರಲ್ಲಿ ಲಾಹೋರ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಜಾವೇದ್‌ ಮಿಯಾಂದಾದ್‌ ಅವರ ಇನಿಂಗ್ಸ್‌ನಿಂದ ವಿರಾಟ್‌ ಕೊಹ್ಲಿ ಶತಕಗಳವರೆಗೆ ಕ್ರಿಕೆಟಿಗರ ತಲೆಮಾರುಗಳು ಚಾಚಾ ಅವರ ಘೋಷಣೆಗಳಿಗೆ ಸಾಕ್ಷಿಯಾಗಿವೆ. ಇಲ್ಲಿಯವರೆಗೆ 300ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಅವರ ಉಪಸ್ಥಿತಿ ಕಂಡಿದೆ.