ಚಂದ್ರಯಾನ–2 ಲ್ಯಾಂಡರ್‌ಗೆ ಪರೀಕ್ಷೆ ವೇಳೆ ಹಾನಿ

0
299

ಚಂದ್ರಯಾನ–2ರ ಲ್ಯಾಂಡರ್‌ ‘ವಿಕ್ರಮ್’ ಪರೀಕ್ಷೆ ಸಂದರ್ಭದಲ್ಲಿ ಅಲ್ಪ ಪ್ರಮಾಣದ ಹಾನಿಗೊಳಗಾದ ಕಾರಣ, ಚಂದ್ರನತ್ತ ಬಾಹ್ಯಾಕಾಶ ನೌಕೆ ಉಡಾ
ವಣೆ ಮುಂದೂಡಿಕೆಯಾಗಲಿದೆ.

ಬೆಂಗಳೂರು: ಚಂದ್ರಯಾನ–2ರ ಲ್ಯಾಂಡರ್‌ ‘ವಿಕ್ರಮ್’ ಪರೀಕ್ಷೆ ಸಂದರ್ಭದಲ್ಲಿ ಅಲ್ಪ ಪ್ರಮಾಣದ ಹಾನಿಗೊಳಗಾದ ಕಾರಣ, ಚಂದ್ರನತ್ತ ಬಾಹ್ಯಾಕಾಶ ನೌಕೆ ಉಡಾವಣೆ ಮುಂದೂಡಿಕೆಯಾಗಲಿದೆ.

ಫೆಬ್ರುವರಿಯಲ್ಲಿ ಇಸ್ರೊ ‘ವಿಕ್ರಮ್‌’ ಪರೀಕ್ಷೆ ಮಾಡುವಾಗ ಅದರ ಎರಡು ಕಾಲುಗಳಿಗೆ ಹಾನಿಯಾಗಿತ್ತು. ಹೀಗಾಗಿ ಲ್ಯಾಂಡರ್‌ ಪರೀಕ್ಷಾ ಕಾರ್ಯವನ್ನು ಮೇ ತಿಂಗಳವರೆಗೆ ಸ್ಥಗಿತಗೊಳಿಸಲಾಗಿದೆ.
 
ರೋವರ್‌ ಮತ್ತು ಆರ್ಬಿಟರ್‌ಗಳನ್ನು ಪರೀಕ್ಷೆಗೆ ಮೊದಲೇ ಅಳವಡಿಸಿ, ಎಲ್ಲ ಮಾನದಂಡಗಳನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಲ್ಯಾಂಡಿಂಗ್‌ ಪರೀಕ್ಷೆ ಸಂದರ್ಭದಲ್ಲಿ ಲ್ಯಾಂಡರ್‌ ಕಾಲುಗಳು ಭಾರ ತಾಳದೆ, ಹಾನಿಗೊಳಗಾಯಿತು. ಭಾರವನ್ನು ತಾಳಲಾಗದಷ್ಟು ಶಕ್ತಿ ಹೊಂದಿರಲಿಲ್ಲ ಎಂದು ಮೂಲಗಳು ಹೇಳಿವೆ. ಈ ವೈಫಲ್ಯಕ್ಕೆ ಕಾರಣ ತಿಳಿದುಕೊಂಡು, ಸಮಸ್ಯೆಯನ್ನು ಸರಿಪಡಿಸಲು ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.