ಚಂದ್ರಯಾನ–2 : ತಾಂತ್ರಿಕ ದೋಷ, ಅನಿರ್ದಿಷ್ಟಾವಧಿಗೆ ಮುಂದೂಡಿಕೆ

0
44

ರಾಕೆಟ್ ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷಿ ‘ಚಂದ್ರಯಾನ–2’ ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಜುಲೈ 15 ರ ನಸುಕಿನ ಜಾವ 2.51 ಕ್ಕೆ ಬಾಹ್ಯಾಕಾಶ ನೌಕೆಯ ಉಡ್ಡಯನಕ್ಕೆ ಸಮಯ ನಿಗದಿಯಾಗಿತ್ತು.

ಚೆನ್ನೈ: ರಾಕೆಟ್ ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷಿ ‘ಚಂದ್ರಯಾನ–2’ ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಜುಲೈ 15 ರ ನಸುಕಿನ ಜಾವ 2.51 ಕ್ಕೆ ಬಾಹ್ಯಾಕಾಶ ನೌಕೆಯ ಉಡ್ಡಯನಕ್ಕೆ ಸಮಯ ನಿಗದಿಯಾಗಿತ್ತು. ಇಡೀ ಜಗತ್ತಿನ ಚಿತ್ತ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನೆಟ್ಟಿತ್ತು.

ಚಂದ್ರನ ಮೇಲೆ ಮನುಷ್ಯ ಹೆಜ್ಜೆ ಇಟ್ಟ 50 ನೇ ವರ್ಷಾಚರಣೆಗೆ ಕೇವಲ ಐದು ದಿನಗಳ ಮೊದಲು ಭಾರತದ ಮಹತ್ವದ ಬಾಹ್ಯಾಕಾಶ ಸಾಹಸಕ್ಕೆ ದಿನಾಂಕ ನಿಗದಿಯಾಗಿತ್ತು. ಅಮೆರಿಕ ನೀಲ್ ಅರ್ಮ್ ಸ್ಟ್ರಾಂಗ್ ಮೊದಲ ಬಾರಿಗೆ ಚಂದ್ರ ಮೇಲೆ ಹೆಜ್ಜೆ ಇಟ್ಟ ದಿನ ಜುಲೈ 20,1969 ಚಂದ್ರಯಾನ–2 ಉಡ್ಡಯನಕ್ಕೆ ಇಸ್ರೋ ದಿನಾಂಕ ನಿಗದಿಪಡಿಸುವಲ್ಲಿ ಈ ಅಂಶವನ್ನೂ ಈ ಹಿಂದೆ ಗಮನದಲ್ಲಿ ಇರಿಸಿಕೊಂಡಿತ್ತು. ಇಂದು ಮುಂದಿನ ದಿನಾಂಕ ಎಂದು ಘೋಷಿಸಿಸಬಹುದು ಎಂಬ ಕುತೂಹಲ ಬಾಹ್ಯಾಕಾಶ ಆಸಕ್ತರಲ್ಲಿ ಮೂಡಿದೆ.

ಹೊಸ ದಿನಾಂಕ ಘೋಷಿಸುತ್ತೇವೆ

ಚಂದ್ರಯಾನ–2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ  ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು. ಮುಂಜಾಗ್ರತೆ ಕ್ರಮವಾಗಿ ಚಂದ್ರಯಾನ–2 ಉಡ್ಡಯನವನ್ನು ಇಂದು ರದ್ದುಪಡಿಸಲು ನಿರ್ಧರಿಸಲಾಯಿತು. ಹೊಸ ದಿನಾಂಕಗಳನ್ನು ನಂತರ ಘೋಷಿಸಲಾಗುವುದು ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿತು.

ಜುಲೈನಲ್ಲಿ ನಡೆಯುವುದು ಅನುಮಾನ

ಚಂದ್ರಯಾನ-2 ಉಡ್ಡಯನಕ್ಕೆ ಜುಲೈ 15, 16, 29 ಮತ್ತು 30 ಸೂಕ್ತ ದಿನಾಂಕಗಳೆಂದು ಗುರುತಿಸಲಾಗಿತ್ತು. ಇದೀಗ ಜುಲೈ 15 ರಂದು ನೌಕೆ ನಭಕ್ಕೆ ನೆಗೆಯಲಿಲ್ಲ ತಾಂತ್ರಿಕ ಪರಿಶೀಲನೆಗೆ 10 ದಿನಗಳು ಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಜುಲೈ ತಿಂಗಳಿನಲ್ಲಿ ಕಂಡುಕೊಂಡಿದ್ದ ಇತರ ಮೂರು ದಿನಾಂಕಗಳಂದು ಉಡಾವಣೆ ಸಾಧ್ಯವಿಲ್ಲ.

ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸಿಸಲು ಕಾಲಾವಕಾಶ ಬೇಕು ಬಹುಶಃ ಸಪ್ಟೆಂಬರ್ ತಿಂಗಳಲ್ಲಿ ಮುಂದಿನ ದಿನಾಂಕ ನಿಗದಿಪಡಿಸಬಹುದು ಎನ್ನುವ ಇಸ್ರೋ ಮೂಲಗಳ ಹೇಳಿಕೆಯನ್ನು ಹಿಂದೂಸ್ತಾನ ಟೈಮ್ಸ್ ವರದಿಮಾಡಿದೆ.

ಉಡ್ಡಯನಕ್ಕೆ 56 ನಿಮಿಷ 24 ಸೆಕೆಂಡ್ ಬಾಕಿಯಿತ್ತು.

‘ಚಂದ್ರಯಾನ–2’ ಉಡ್ಡಯನವನ್ನು ಟಿ 56 ನಿಮಿಷದಲ್ಲಿ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿತು. ಇಸ್ರೋದಿಂದ ಈ ಘೋಷಣೆ ಹೊರಬಿದ್ದಾಗ ಸಮಯ ಸುಮಾರು ಸೋಮವಾರ 1.55 ಗಂಟೆ. ಉಡ್ಡಯನಕ್ಕೆ ಕೇವಲ 56 ನಿಮಿಷ 24 ಸೆಕೆಂಡ್ ಬಾಕಿಯಿತ್ತು.

ರಾಕೆಟ್ ನ ಸೂಕ್ಷ್ಮ ಪರಿಶೀಲನೆಗೆ 10 ದಿನ ಬೇಕಾಗುತ್ತೆ

ತಾಂತ್ರಿಕ ದೋಷ ಪತ್ತೆಯಾಗಿರುವ ರಾಕೆಟ್ ಅನ್ನು ಪ್ರಯೋಗಾಲಯಕ್ಕೆ ಮತ್ತೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ತುಂಬಿರುವ ಇಂಧನ ಖಾಲಿಮಾಡಬೇಕು. ದೋಷವನ್ನು ಸರಿ ಅರ್ಥೈಸಿಕೊಂಡ ನಂತರವಷ್ಟೇ ಮುಂದಿನ ಉಡ್ಡಯನ ದಿನಾಂಕ ತಿಳಿಸಲು ಸಾಧ್ಯ. ಕನಿಷ್ಠ 10 ದಿನಗಳಾದರೂ ಬೇಕು ಎಂದು ಇಸ್ರೋ ಅಧಿಕಾರಿಗಳನ್ನು ಉಲ್ಲೇಖಿಸಿ ಐ.ಎ.ಎನ್.ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.