ಚಂದ್ರನ ಮೇಲಿನ ನೀರು ಪತ್ತೆಗೆ ಚಂದ್ರಯಾನ–1 ನೆರವು

0
25

ಭಾರತದ ಬಾಹ್ಯಾಕಾಶ ನೌಕೆ ‘ಚಂದ್ರಯಾನ–1’ ನೀಡಿರುವ ಮಾಹಿತಿಯಿಂದ ವಿಜ್ಞಾನಿಗಳು ಚಂದ್ರನ ಮೇಲೆ ನೀರಿನ ಅಂಶಗಳಿರುವ ಕುರಿತ ನಕಾಶೆಯನ್ನು ರಚಿಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಚಂದ್ರಯಾನದ ಮೂಲಕ ಕೈಗೊಳ್ಳುವ ಪ್ರಯೋಗಗಳಿಗೆ ಮತ್ತಷ್ಟು ಅನುಕೂಲವಾಗಲಿವೆ ಎಂದು ವಿಶ್ಲೇಷಿಸಲಾಗಿದೆ.

ಈ ವಿಷಯದ ಕುರಿತು ‘ಸೈನ್ಸ್‌ ಅಡ್ವಾನ್ಸಸ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಅಮೆರಿಕದ ಬ್ರೌನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ. 2009ರಲ್ಲೂ ನೀರು ಮತ್ತಿತರ ಅಂಶಗಳ ಕುರಿತು ಪತ್ತೆ ಮಾಡಲಾಗಿತ್ತು.

‘ಚಂದ್ರನ ಮೇಲ್ಮೈಯಲ್ಲಿ ನೀರಿರುವ ಬಗ್ಗೆ ಕುರುಗಳು ಎಲ್ಲೆಡೆ ಕಾಣಿಸುತ್ತಿವೆ’ ಎಂದು ಈ ಬಗ್ಗೆ ಅಧ್ಯಯನ ನಡೆಸಿರುವ ಬ್ರೌನ್‌ ವಿಶ್ವವಿದ್ಯಾಲಯ ಶುಯಿ ಲಿ ತಿಳಿಸಿದ್ದಾರೆ.

ಧ್ರುವಗಳ ಕಡೆಗೆ ನೀರಿನ ಪ್ರಮಾಣವು ಹೆಚ್ಚಾಗುತ್ತಿದ್ದು, ವಿಭಿನ್ನ ಸಂಯೋಜಿತ ಭೂಪ್ರದೇಶಗಳಲ್ಲಿ ಗಮನಾರ್ಹ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ಲಿ ಹೇಳಿದ್ದಾರೆ.