ಚಂದ್ರನ ಕಣಗಳನ್ನು ಪತ್ತೆ ಮಾಡಿದ ಚಂದ್ರಯಾನ-2 ಆರ್ಬಿಟರ್

0
15

ಚಂದ್ರಯಾನ-2ರ ಆರ್ಬಿಟರ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಕೆಲ ದಿನಗಳ ಕಾರ್ಯಾಚರಣೆಯಲ್ಲಿ ಆರ್ಬಿಟರ್ ಚಂದ್ರನ ಮೇಲೆ ಕೆಲ ಕಣಗಳನ್ನು ಪತ್ತೆ ಮಾಡಿದ್ದು, ಅದರ ತೀವ್ರತೆಯ ಬಗ್ಗೆಯೂ ಮಾಹಿತಿ ಪಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ನವದೆಹಲಿ: ಚಂದ್ರಯಾನ-2ರ ಆರ್ಬಿಟರ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಕೆಲ ದಿನಗಳ ಕಾರ್ಯಾಚರಣೆಯಲ್ಲಿ ಆರ್ಬಿಟರ್ ಚಂದ್ರನ ಮೇಲೆ ಕೆಲ ಕಣಗಳನ್ನು ಪತ್ತೆ ಮಾಡಿದ್ದು, ಅದರ ತೀವ್ರತೆಯ ಬಗ್ಗೆಯೂ ಮಾಹಿತಿ ಪಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಆರ್ಬಿಟರ್ ಭೂಮಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಇದರಲ್ಲಿ ಅಳವಡಿಸಿರುವ ಪೆಲೋಡ್ ಕ್ಲಾಸ್ ಎಂಬ ಯಂತ್ರ ಇವುಗಳನ್ನು ಪತ್ತೆ ಮಾಡಿದೆ. ಚಂದ್ರನ ಮಣ್ಣಿನಲ್ಲಿನ ಅಂಶಗಳ ಬಗ್ಗೆ ಸಂಶೋಧನೆ ನಡೆಸಲು ಇದನ್ನು ಅಳವಡಿಸಲಾಗಿದೆ. ಚಂದ್ರನ ಮೇಲ್ಮೈ ಸೌರ ಜ್ವಾಲೆಯ ಕ್ಷ-ಕಿರಣಗಳು ಬಿದ್ದಾಗ ಕಣಗಳನ್ನು ಉತ್ತಮವಾಗಿ ಗಮನಿಸಬಹುದು. ಇದರ ಪರಿಣಾಮ ಉಂಟಾಗುವ ಕ್ಷ-ಕಿರಣಗಳ ಹೊರಸೂಸುವಿಕೆಯನ್ನು ಕ್ಲಾಸ್ ಯಂತ್ರ ಪತ್ತೆ ಮಾಡುತ್ತದೆ ಎಂದು ಇಸ್ರೊ ತಿಳಿಸಿದೆ.

ಪ್ರತಿ 29 ದಿನಗಳಲ್ಲಿ ಚಂದ್ರಯಾನ-2ರ ಆರ್ಬಿಟರ್ 6 ದಿನಗಳ ಕಾಲ ಜಿಯೋಟೆಲ್ ಮೂಲಕ ಸಂಚರಿಸುತ್ತಿದೆ. ಈ ಸಮಯದಲ್ಲಿ ಅಲ್ಲಿನ ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎಂದು ಇಸ್ರೊ ಮಾಹಿತಿ ನೀಡಿದೆ. ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದರೂ, ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಮೂಲಕವೇ ಇಸ್ರೋ ಅನೇಕ ಸಂಶೋಧನೆಗಳನ್ನು ನಡೆಸುತ್ತಿದೆ. ಯೋಜನೆಗೆ ಹೆಚ್ಚು ಇಂಧನ ಬಳಕೆಯಾಗದ ಕಾರಣ ಆರ್ಬಿಟರ್​ನಲ್ಲಿ ಹೆಚ್ಚುವರಿ ಇಂಧನ ಉಳಿದಿದ್ದು, ಆರ್ಬಿಟರ್ ಕಾರ್ಯ ಅವಧಿ 7 ವರ್ಷಕ್ಕೆ ವಿಸ್ತರಣೆಯಾಗಿದೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡರೂ ಸಹ ಚಂದ್ರಯಾನ-2 ಯೋಜನೆ ಭಾಗಶಃ ಸಫಲವಾಗಿದೆ ಎಂದು ಇಸ್ರೋ ತಿಳಿಸಿತ್ತು.