ಚಂದ್ರನಲ್ಲಿದೆ ನೀರಿನ ಒರತೆ: ಚಂದ್ರಯಾನ ದತ್ತಾಂಶಕ್ಕೆ ನಾಸಾ ಮನ್ನಣೆ

0
637

ಚಂದ್ರನಲ್ಲಿ ನೀರಿನ ಇರುವಿಕೆ ಮತ್ತು ಅಲ್ಲಿನ ಭೌಗೋಳಿಕ ಅಧ್ಯಯನ ಕುರಿತು ವಿವಿಧ ಸಂಶೋಧನೆ ನಡೆಯುತ್ತಿರುವಾಗಲೇ ಚಂದ್ರಯಾನ-1 ಕಳುಹಿಸಿದ್ದ ದತ್ತಾಂಶಗಳನ್ನು ಅಧ್ಯಯನ ಮಾಡಿರುವ ನಾಸಾ, ಚಂದ್ರನಲ್ಲಿ ನೀರಿನ ಅಂಶಗಳು ಇವೆ ಎಂದು ಸ್ಪಷ್ಟಪಡಿಸಿದೆ.

ವಾಷಿಂಗ್ಟನ್‌: ಚಂದ್ರನಲ್ಲಿ ನೀರಿನ ಇರುವಿಕೆ ಮತ್ತು ಅಲ್ಲಿನ ಭೌಗೋಳಿಕ ಅಧ್ಯಯನ ಕುರಿತು ವಿವಿಧ ಸಂಶೋಧನೆ ನಡೆಯುತ್ತಿರುವಾಗಲೇ ಚಂದ್ರಯಾನ-1 ಕಳುಹಿಸಿದ್ದ ದತ್ತಾಂಶಗಳನ್ನು ಅಧ್ಯಯನ ಮಾಡಿರುವ ನಾಸಾ, ಚಂದ್ರನಲ್ಲಿ ನೀರಿನ ಅಂಶಗಳು ಇವೆ ಎಂದು ಸ್ಪಷ್ಟಪಡಿಸಿದೆ. 

ಅಲ್ಲಿನ ದಕ್ಷಿಣ ಧ್ರುವದಲ್ಲಿ ಮಂಜುಗಡ್ಡೆಯಂತಹ ರಚನೆ ಕಂಡುಬಂದಿದ್ದು, ಉತ್ತರ ಧ್ರುವದಲ್ಲಿ ಹೆಚ್ಚು ವಿಸ್ತಾರದ ಪ್ರದೇಶಗಳಲ್ಲಿ ಕಂಡುಬಂದಿದೆ. ಆದರೆ ಹೆಚ್ಚಿನ ಕಡೆ ಹರಡಿಕೊಂಡಿದೆ ಎಂದು ಅಧ್ಯಯನ ಹೇಳಿದೆ. 

ಚಂದ್ರನ ಮೇಲ್ಭಾಗದಲ್ಲಿ ಹಲವೆಡೆ ದಟ್ಟ ರೀತಿಯ ಮಂಜುಗಡ್ಡೆಯಂತಹ ರಚನೆ ಕಂಡುಬಂದಿದೆ. ಭಾರತವು 10 ವರ್ಷದ ಹಿಂದೆ ಕಳುಹಿಸಿದ್ದ ಚಂದ್ರಯಾನ-1 ಉಪಗ್ರಹ ಕಳುಹಿಸಿದ್ದ ದತ್ತಾಂಶ ಅದನ್ನು ದೃಢಪಡಿಸಿದೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ. 

ಮಂಜುಗಡ್ಡೆಯ ಇರುವಿಕೆ ಬಹಳ ಹಿಂದಿನ ಕಾಲದಿಂದಲೂ ಇದ್ದಿರಬಹುದು. ಮೇಲ್ಪದರದ ವಿವರವಾದ ಅಧ್ಯಯನದಿಂದ ಅದು ಸ್ಪಷ್ಟವಾಗಿದೆ. ನಾಸಾ ವಿಜ್ಞಾನಿಗಳು ಮೂನ್ ಮೈನರಾಲಜಿ ಮ್ಯಾಪರ್ (ಎಂ3) ಉಪಕರಣ ಮೂಲಕ ದತ್ತಾಂಶದ ಅಧ್ಯಯನ ಮಾಡಿದ್ದಾರೆ. ಅದು ಚಂದ್ರನ ಮೇಲ್ಭಾಗದಲ್ಲಿ ನೀರು, ಮಂಜುಗಡ್ಡೆ ಇರುವುದನ್ನು ದೃಢಪಡಿಸಿದೆ ಎಂದಿದ್ದಾರೆ. 

2008ರಲ್ಲಿ ಇಸ್ರೋ ಚಂದ್ರನ ಅಧ್ಯಯನಕ್ಕಾಗಿ ಚಂದ್ರಯಾನ-1 ಉಪಗ್ರಹವನ್ನು ಉಡಾಯಿಸಿತ್ತು. ಅದು ಚಂದ್ರನ ಮೇಲ್ಮೈ ರಚನೆ, ಅಲ್ಲಿನ ಹವಾಗುಣ ಕುರಿತು ಮಹತ್ವದ ದತ್ತಾಂಶಗಳನ್ನು ರವಾನಿಸಿದೆ.