“ಗ್ರೆಟಾ ಥನ್‌ಬರ್ಗ್‌”ಗೆ ಆಮ್ನೆಸ್ಟಿ ಪ್ರಶಸ್ತಿ

0
25

ಅಮ್ನೆಸ್ಟಿ ಇಂಟರನ್ಯಾಷನಲ್ ನ “ಆತ್ಮಸಾಕ್ಷಿಯ ರಾಯಭಾರಿಗಳು ಪ್ರಶಸ್ತಿ ಗೆ ಸ್ವೀಡನ್ ನ ಪರಿಸರ ಹೋರಾಟಗಾರ್ತಿ “ಫ್ರೈಡೇಸ್ ಫಾರ್ ಪ್ಯೂಚರ್” ಯುವ ಚಳುವಳಿಯ ಗ್ರೆಟಾ ಥನ್‌ಬರ್ಗ್‌ಗೆ (16) ಅವರಿಗೆ ಲಭಿಸಿದೆ.

ವಾಷಿಂಗ್ಟನ್(ಎ.ಎಫ್.ಪಿ): ಅಮ್ನೆಸ್ಟಿ ಇಂಟರನ್ಯಾಷನಲ್ ನ “ಆತ್ಮಸಾಕ್ಷಿಯ ರಾಯಭಾರಿಗಳು ಪ್ರಶಸ್ತಿ ಗೆ ಸ್ವೀಡನ್ ನ ಪರಿಸರ ಹೋರಾಟಗಾರ್ತಿ “ಫ್ರೈಡೇಸ್ ಫಾರ್ ಪ್ಯೂಚರ್”  ಯುವ ಚಳುವಳಿಯ ಗ್ರೆಟಾ ಥನ್‌ಬರ್ಗ್‌ಗೆ (16) ಅವರಿಗೆ ಲಭಿಸಿದೆ.

ಹವಾಮಾನದ ವೈಪರಿತ್ಯದ ಪರಿಣಾಮ ತಪ್ಪಿಸಲು ತುರ್ತಾಗಿ  ಕ್ರಮ ಕೈಗೊಳ್ಳಬೇಕಾದ ಅಗತ್ಯಗಳನ್ನು ಪ್ರಚಾರಪಡಿಸುವಲ್ಲಿ ಇವರು ಕೈಗೊಂಡ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಗ್ರೆಟಾ ಬಂದಾಗ ಸಭಾಂಗಣದಲ್ಲಿದ್ದವರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅವರು ಹವಾಮಾನ ವೈಪರಿತ್ಯ ತಡೆಯಲು ರಾಜಕೀಯ ಇಚ್ಚಾಶಕ್ತಿ ಇಲ್ಲ. ಆದ್ದರಿಂದ ಪ್ರತಿಯೊಬ್ಬರು ಪ್ರಯತ್ನಪಟ್ಟು ಅಧಿಕಾರದಲ್ಲಿರುವವರನ್ನು ಕಾರ್ಯೋನ್ಮುಖರನ್ನಾಗಿಸಬೇಕಿದೆ” ಎಂದು ಗ್ರೆಟಾ ಹೇಳಿದಳು.