ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್​ ಸಾವಂತ್​ ಆಯ್ಕೆ: ಸುಧಿನ್​ ಧಾವಾಲಿಕರ್​ ಮತ್ತು ವಿಜಯ್​ ಸರ್ದೇಸಾಯಿ ಡಿಸಿಎಂ

0
1233

ಗೋವಾದ ವಿಧಾನಸಭಾಧ್ಯಕ್ಷ ಪ್ರಮೋದ್​ ಸಾವಂತ್​ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮನೋಹರ್​ ಪರಿಕ್ಕರ್​ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನವನ್ನು ಬಿಜೆಪಿಯ ಪ್ರಮೋದ್​ ಸಾವಂತ್​ ತುಂಬಲಿದ್ದಾರೆ.

ಗೋವಾ: ಗೋವಾದ ವಿಧಾನಸಭಾಧ್ಯಕ್ಷ ಪ್ರಮೋದ್​ ಸಾವಂತ್​ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮನೋಹರ್​ ಪರಿಕ್ಕರ್​ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನವನ್ನು ಬಿಜೆಪಿಯ ಪ್ರಮೋದ್​ ಸಾವಂತ್​ ತುಂಬಲಿದ್ದಾರೆ.

ಗೋವಾದಲ್ಲಿ ಬಿಜೆಪಿಗೆ ಬೆಂಬಲ ನೀಡಿರುವ ಮಹಾರಾಷ್ಟ್ರವಾದಿ ಗೋಮಾಂತಕ್​ ಪಾರ್ಟಿಯ (ಎಂಜಿಪಿ) ಸುಧಿನ್​ ಧಾವಾಲಿಕರ್​ ಮತ್ತು ಗೋವಾ ಫಾರ್ವರ್ಡ್​ ಪಾರ್ಟಿಯ (ಜಿಎಫ್​ಪಿ) ವಿಜಯ್​ ಸರ್ದೇಸಾಯಿ ಉಪಮುಖ್ಯಮಂತ್ರಿಗಳಾಗಿರಲಿದ್ದಾರೆ. 

ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಸಾಕಷ್ಟು ಚರ್ಚಿಸಿದ ಬಳಿಕ ಸಿಎಂ ಪಟ್ಟದ ರೇಸ್​ನಲ್ಲಿದ್ದ ವಿಶ್ವಜಿತ್​ ರಾಣೆ ಮತ್ತು ಎಂಜೆಪಿಯ ಸುಧಿನ್​ ಧಾವಾಲಿಕರ್​ ಸಿಎಂ ಪಟ್ಟವನ್ನು ಪ್ರಮೋದ್​ ಸಾವಂತ್​ಗೆ ಬಿಟ್ಟುಕೊಡಲು ನಿರ್ಧರಿಸಿದರು ಎನ್ನಲಾಗಿದೆ.

ಸದಸ್ಯಬಲ 36ಕ್ಕೆ ಕುಸಿತ
ಸಿಎಂ ಆಗಿದ್ದ ಬಿಜೆಪಿಯ ಮನೋಹರ್​ ಪರಿಕ್ಕರ್​ ಮತ್ತು ಶಾಸಕ ಫಾನ್ಸಿಸ್​ ಡಿ ಸೋಜಾ ಅವರ ಅಕಾಲಿಕ ಮರಣ ಹಾಗೂ ಕಾಂಗ್ರೆಸ್​ನ ಇಬ್ಬರು ಸದಸ್ಯರ ರಾಜೀನಾಮೆಯಿಂದಾಗಿ 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಸದ್ಯ 36 ಶಾಸಕರು ಇದ್ದಾರೆ. ಹಾಗಾಗಿ ಬಹುಮತ ಸಾಬೀತುಪಡಿಸಲು 19 ಶಾಸಕರ ಸಮರ್ಥನೆ ಸಾಕಾಗುತ್ತದೆ.

ಕಾಂಗ್ರೆಸ್​ 15 ಶಾಸಕರನ್ನು ಹೊಂದಿದ್ದರೆ ಬಿಜೆಪಿಯ ಸಂಖ್ಯಾಬಲ 12ಕ್ಕೆ ಕುಸಿದಿದೆ. ಜಿಎಫ್​ಪಿ, ಎಂಜಿಪಿ ಮತ್ತು ಪಕ್ಷೇತರರು ತಲಾ ಮೂರು ಜನರಿದ್ದು, ಇವರೆಲ್ಲರೂ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎನ್​ಸಿಪಿಯ ಒಬ್ಬರು ಸದಸ್ಯರಿದ್ದಾರೆ. (ಏಜೆನ್ಸೀಸ್​)