ದುರುಪಯೋಗದ ಕಾರಣ ‘ಗೋಲ್ಡನ್ ವೀಸಾ’ವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಬ್ರಿಟನ್ ಸರ್ಕಾರ ಡಿಸೆಂಬರ್ 6 ರ ಗುರುವಾರ ತಿಳಿಸಿದೆ.ಅಗ್ರ ಹೂಡಿಕೆದಾರರಿಗೆ ನೀಡುವ (Tier 1 Visa) ವೀಸಾವನ್ನು ‘ಗೋಲ್ಡನ್ ವೀಸಾ’ ಎಂದು ಕರೆಯಲಾಗುತ್ತದೆ. ಬ್ರಿಟನ್ನಲ್ಲಿ ಮಿಲಿಯನ್ ಪೌಂಡ್ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಉಳ್ಳವರಿಗೆ ಕ್ಷಿಪ್ರಗತಿಯಲ್ಲಿ ಈ ವೀಸಾ ನೀಡಲಾಗುತ್ತಿತ್ತು. ಈ ವೀಸಾವನ್ನು ಶುಕ್ರವಾರ ರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದ್ದು. ಮುಂದಿನ ವರ್ಷ ಹೊಸ ಕಾನೂನು ಜಾರಿಯಾಗುವವರೆಗೆ ಈ ನಿರ್ಬಂಧ ಮುಂದು
ಲಂಡನ್ (ಪಿಟಿಐ): ದುರುಪಯೋಗದ ಕಾರಣ ‘ಗೋಲ್ಡನ್ ವೀಸಾ’ವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಬ್ರಿಟನ್ ಸರ್ಕಾರ ಡಿಸೆಂಬರ್ 6 ರ ಗುರುವಾರ ತಿಳಿಸಿದೆ.
ಅಗ್ರ ಹೂಡಿಕೆದಾರರಿಗೆ ನೀಡುವ (Tier 1 Visa) ವೀಸಾವನ್ನು ‘ಗೋಲ್ಡನ್ ವೀಸಾ’ ಎಂದು ಕರೆಯಲಾಗುತ್ತದೆ. ಬ್ರಿಟನ್ನಲ್ಲಿ ಮಿಲಿಯನ್ ಪೌಂಡ್ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಉಳ್ಳವರಿಗೆ ಕ್ಷಿಪ್ರಗತಿಯಲ್ಲಿ ಈ ವೀಸಾ ನೀಡಲಾಗುತ್ತಿತ್ತು. ಈ ವೀಸಾವನ್ನು ಶುಕ್ರವಾರ ರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದ್ದು. ಮುಂದಿನ ವರ್ಷ ಹೊಸ ಕಾನೂನು ಜಾರಿಯಾಗವವರೆಗೆ ಈ ನಿರ್ಬಂಧ ಮುಂದು
ವರಿಯಲಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, 2009ರಿಂದ ಭಾರತದ 76 ಮಂದಿ ಕೋಟ್ಯಧಿಪತಿಗಳು ಈ ವರ್ಗದಲ್ಲಿ ವೀಸಾ ಪಡೆದು, ಬ್ರಿಟನ್ನಲ್ಲೇ ಶಾಶ್ವತವಾಗಿ ನೆಲೆಸಿದ್ದಾರೆ. 2013ರಲ್ಲಿ 16 ಮಂದಿ ಭಾರತೀಯರು ಈ ಸೌಲಭ್ಯ ಪಡೆದಿದ್ದರೆ, 2013ರಲ್ಲಿ ಏಳು ಮಂದಿಗೆ ಇಳಿಕೆಯಾಗಿತ್ತು.
ಕಳೆದ ವರ್ಷ 1 ಸಾವಿರ ಮಂದಿಗೆ ಈ ರೀತಿಯ ವೀಸಾ ನೀಡಲಾಗಿತ್ತು, ಇದರ ಹೆಚ್ಚಿನ ಲಾಭವನ್ನು ಚೀನಾ ಹಾಗೂ ರಷ್ಯಾದ ಕೋಟ್ಯಧಿಪತಿಗಳು ಪಡೆದುಕೊಂಡಿದ್ದರು.