ಗೃಹಸಾಲದ ಓವರ್‌ಡ್ರಾಫ್ಟ್‌ ಖಾತೆಗಳಲ್ಲಿ ನಿಷ್ಕ್ರಿಯ ಹಣ ಹೆಚ್ಚಳ: ಬ್ಯಾಂಕ್‌ಗಳಿಗೆ ನಷ್ಟ

0
14

ದೊಡ್ಡ ದೊಡ್ಡ ಉದ್ಯಮಿ ಸಾಲಗಾರರು ತಮ್ಮ ಗೃಹಸಾಲದ ಓವರ್‌ಡ್ರಾಫ್ಟ್‌ ಖಾತೆಗಳಲ್ಲಿ ದೊಡ್ಡ ಮೊತ್ತದ ಹಣ ಕಡಿಮೆ ಬಡ್ಡಿಯ ಗೃಹಸಾಲದ ಮೊತ್ತವನ್ನು ಜಮೆ ಮಾಡಿ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಹೊಸ ಗ್ರಾಹಕರಿಗೆ ಸಾಲ ನೀಡಲು ಬ್ಯಾಂಕ್‌ಗಳಲ್ಲಿ ಹಣವಿಲ್ಲದಂತಾಗಿದೆ.

ಮುಂಬಯಿ: ದೊಡ್ಡ ದೊಡ್ಡ ಉದ್ಯಮಿ ಸಾಲಗಾರರು ತಮ್ಮ ಗೃಹಸಾಲದ ಓವರ್‌ಡ್ರಾಫ್ಟ್‌ ಖಾತೆಗಳಲ್ಲಿ ದೊಡ್ಡ ಮೊತ್ತದ ಹಣ ಕಡಿಮೆ ಬಡ್ಡಿಯ ಗೃಹಸಾಲದ ಮೊತ್ತವನ್ನು ಜಮೆ ಮಾಡಿ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಹೊಸ ಗ್ರಾಹಕರಿಗೆ ಸಾಲ ನೀಡಲು ಬ್ಯಾಂಕ್‌ಗಳಲ್ಲಿ ಹಣವಿಲ್ಲದಂತಾಗಿದೆ. 

ಸದ್ಯ ಹಣಕಾಸು ಮಾರುಕಟ್ಟೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ – ಎರಡೂ ಜಡ ಸ್ಥಿತಿಯಲ್ಲಿದ್ದು, ಈ ಓವರ್‌ಡ್ರಾಫ್ಟ್‌ ಖಾತೆಗಳಲ್ಲಿರುವ ನಿಷ್ಕ್ರಿಯ ಹಣದ ಪ್ರಮಾಣ ಹೆಚ್ಚುತ್ತಿದೆ. ‘ಗಣನೀಯ ಪ್ರಮಾಣದ ಸಾಲದ ಹಣ ಓವರ್‌ಡ್ರಾಫ್ಟ್‌ ಖಾತೆಗಳಲ್ಲಿ ಸ್ಥಗಿತಗೊಂಡಿದ್ದು, ಬ್ಯಾಂಕ್‌ಗಳಿಗೆ ಆದಾಯ ನಷ್ಟವಾಗುತ್ತಿದೆ. ಆದರೆ ಈ ಹಣದ ನಿರ್ವಹಣೆಯ ವೆಚ್ಚಗಳು ಮಾತ್ರ ಹಾಗೇ ಉಳಿದಿವೆ. ಏಜೆಂಟರಿಗೆ ನೀಡುವ ಕಮಿಷನ್ ಮತ್ತು ಸಾಂದರ್ಭಿಕ ವೆಚ್ಚಗಳು ಹಾಗೆಯೇ ಉಳಿದಿವೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಬ್ಯಾಂಕುಗಳು ಈ ಓವರ್‌ಡ್ರಾಫ್ಟ್‌ ಸೌಲಭ್ಯವನ್ನು ಹಿಂದೆಗೆದುಕೊಳ್ಳುತ್ತಿಲ್ಲ; ಆದರೆ ನಷ್ಟ ಭರ್ತಿಗಾಗಿ ಹೆಚ್ಚುವರಿ ಷರತ್ತುಗಳನ್ನು ವಿಧಿಸಲಾರಂಭಿಸಿವೆ. ಗ್ರಾಹಕರು ತಮ್ಮ ಓವರ್‌ಡ್ರಾಫ್ಟ್‌ ಖಾತೆಗಳಲ್ಲಿ ಸಾಲದ ಅರ್ಧಕ್ಕಿಂತಲೂ ಹೆಚ್ಚು ಮೊತ್ತವನ್ನು ಬಳಸದೆ ಇಟ್ಟುಕೊಂಡಿದ್ದರೆ ಸಾಲದ ವರ್ಗಾವಣೆಗೆ ಕೆಲವು ಬ್ಯಾಂಕುಗಳು ನಿರಾಕರಿಸುತ್ತಿವೆ. ಇನ್ನು ಕೆಲವು ಬ್ಯಾಂಕುಗಳು ಸಣ್ಣ ಮೊತ್ತದ ಸಾಲ ನೀಡಲು ಮುಂದಾಗುತ್ತಿಲ್ಲ. ಮತ್ತೆ ಕೆಲವು ಬಹುರಾಷ್ಟ್ರೀಯ ಬ್ಯಾಂಕುಗಳು ಈ ರೀತಿ ಬಳಸದೆ ಉಳಿದ ಹಣಕ್ಕೆ ವಾರ್ಷಿಕ ಶುಲ್ಕ ವಿಧಿಸುತ್ತಿವೆ. 

ಗೃಹಸಾಲದ ಓವರ್‌ಡ್ರಾಫ್ಟ್‌ ಸೌಲಭ್ಯದ ಮುಂಗಡವನ್ನು ಸಾಲಗಾರರು ಉಳಿತಾಯ ಖಾತೆಯಂತೆ ಬಳಸಿಕೊಳ್ಳುತ್ತಿದ್ದು, ಹೆಚ್ಚುವರಿ ನಿಧಿಯನ್ನು ಅಲ್ಲಿಂದ ವರ್ಗಾವಣೆ ಮಾಡುತ್ತಿದ್ದಾರೆ. ಖಾತೆಯಲ್ಲಿ ಇಟ್ಟುಕೊಂಡಿರುವ ಹೆಚ್ಚುವರಿ ಹಣಕ್ಕೆ ಯಾವುದೇ ಶುಲ್ಕವಿಲ್ಲದಿರುವುದು ಗೃಹಸಾಲದ ಅನುಕೂಲತೆಯಾಗಿದ್ದು, ಅದನ್ನು ಇಂತಹ ಉದ್ಯಮಿಗಳು ಬಳಸಿಕೊಳ್ಳುತ್ತಿದ್ದಾರೆ. 

ಉದ್ಯಮಿ ಸಾಲಗಾರರು ನಡೆಸುವ ಈ ವಹಿವಾಟಿನಿಂದ ಬ್ಯಾಂಕುಗಳು ಬಡ್ಡಿಯ ಆದಾಯವಿಲ್ಲದೆ ನಷ್ಟ ಅನುಭವಿಸುತ್ತಿವೆ. ಬಾಕಿ ಸಾಲಗಳ ವಸೂಲಿಗೆ ಎಲ್ಲ ಅವಕಾಶಗಳಿದ್ದರೂ ಅವುಗಳನ್ನು ಬಳಸಿಕೊಳ್ಳಲಾಗದ ಅಸಹಾಯಕತೆ ಬ್ಯಾಂಕುಗಳದ್ದಾಗಿದೆ. 

ಸಾಮಾನ್ಯವಾಗಿ ಮಧ್ಯಮ ವರ್ಗದ ಸಾಲಗಾರರು ಹೆಚ್ಚುವರಿ ಹಣವನ್ನು ಅವಧಿಪೂರ್ವ ಸಾಲ ಮರುಪಾವತಿಗೆ ಬಳಸಿಕೊಳ್ಳುತ್ತಾರೆ. ಆದರೆ ಹೂಡಿಕೆದಾರರು ಓವರ್‌ಡ್ರಾಫ್ಟ್‌ ಸೌಲಭ್ಯವನ್ನು ಪಡೆದುಕೊಂಡು ಹೆಚ್ಚುವರಿ ಹಣವನ್ನು ಅದರಲ್ಲಿ ಕೂಡಿಡುತ್ತಾರೆ. ತಾತ್ಕಾಲಿಕವಾಗಿ ಹಣವನ್ನು ಆ ಖಾತೆಯಲ್ಲಿಟ್ಟು, ಬಳಿಕ ಮತ್ತೊಂದು ಹೂಡಿಕೆಗೆ ಬಳಸಿಕೊಳ್ಳುತ್ತಾರೆ.