“ಗೂಗಲ್ ಪ್ಲಸ್” ಸಾಮಾಜಿಕ ಜಾಲತಾಣ ತಾತ್ಕಾಲಿಕ ಸ್ಥಗಿತ

0
534

ಬಳಕೆದಾರರ ಮಾಹಿತಿ ಸೋರಿಕೆ ಆರೋಪದ ಹಿನ್ನೆಲೆ ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ.

ವಾಷಿಂಗ್ಟನ್: ಬಳಕೆದಾರರ ಮಾಹಿತಿ ಸೋರಿಕೆ ಆರೋಪದ ಹಿನ್ನೆಲೆ ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಕಳೆದ ಮಾರ್ಚ್​ನಲ್ಲಿಯೇ ಮಾಹಿತಿ ಸೋರಿಕೆಗೆ ಪೂರಕವಾದ ಬಗ್ ಸೇರಿಕೊಂಡಿರುವುದು ಗೂಗಲ್​ಗೆ ತಿಳಿದುಬಂದಿತ್ತು. ಆದರೆ ಬಳಕೆದಾರರಿಗೆ ಈ ಕುರಿತು ಮಾಹಿತಿ ನೀಡಿರಲಿಲ್ಲ. ಆದರೆ ಈ ವಿಷಯವನ್ನು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿ, ಸಾವಿರಾರು ಬಳಕೆದಾರರ ಮಾಹಿತಿ ಸಾರ್ವಜನಿಕಗೊಂಡಿದೆ ಎಂದು ಹೇಳಿತ್ತು. ಹೀಗಾಗಿ ಮುಂದಿನ 10 ತಿಂಗಳವರೆಗೆ ಗೂಗಲ್ ಪ್ಲಸ್ ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಆರ್ಕಟ್ ಬಳಿಕ ಹೊಸ ಸಾಮಾಜಿಕ ಜಾಲತಾಣವನ್ನಾಗಿ ಗೂಗಲ್ ಪ್ಲಸ್​ನ್ನು ಗೂಗಲ್ ಪರಿಚಯಿಸಿತ್ತು. ಆದರೆ ಫೇಸ್​ಬುಕ್​ನಷ್ಟು ಖ್ಯಾತಿ ಗಳಿಸಿರಲಿಲ್ಲ.