ಗೂಗಲ್‌ಗೆ ₹ 1,164 ಕೋಟಿ ದಂಡ

0
559

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ ಆರೋಗ್ಯಕರವಲ್ಲದ ಪೈಪೋಟಿಯಲ್ಲಿ ತೊಡಗಿದೆ’ ಎಂದು ಆರೋಪಿಸಿರುವ ಯುರೋಪಿಯನ್‌ ಒಕ್ಕೂಟ (ಇಯು), ಕಂಪನಿಗೆ ₹ 1,164 ಕೋಟಿ (149 ಕೋಟಿ ಯುರೋ) ದಂಡ ವಿಧಿಸಿದೆ.

ಸೆಲ್ಸ್‌ (ಎಎಫ್‌ಪಿ): ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ ಆರೋಗ್ಯಕರವಲ್ಲದ ಪೈಪೋಟಿಯಲ್ಲಿ ತೊಡಗಿದೆ’ ಎಂದು ಆರೋಪಿಸಿರುವ ಯುರೋಪಿಯನ್‌ ಒಕ್ಕೂಟ (ಇಯು), ಕಂಪನಿಗೆ 1,164 ಕೋಟಿ (149 ಕೋಟಿ ಯುರೋ) ದಂಡ ವಿಧಿಸಿದೆ.

‘ಪ್ರಸಕ್ತ ಮಾರುಕಟ್ಟೆಯಲ್ಲಿ ತಾನು ಹೊಂದಿರುವ ಪ್ರಭಾವಿ ಸ್ಥಾನದ ದುರ್ಬಳಕೆ ಮಾಡಿಕೊಂಡಿರುವ ಕಂಪನಿ, ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಜಾಹೀರಾತು ಕಂಪನಿಗಳಿಗೆ ಮಧ್ಯವರ್ತಿಯಂತೆ ವರ್ತಿಸಿದೆ’ ಎಂದು ಯುರೋಪಿಯನ್‌ ಒಕ್ಕೂಟದ ಸ್ಪರ್ಧಾ ಆಯುಕ್ತರಾದ ಮಾರ್ಗರೆತ್‌ ವೆಸ್ಟಗರ್‌ ತಿಳಿಸಿದ್ದಾರೆ.