ಗೂಗಲ್​ಗೆ -ರೂ. 34,000 ಕೋಟಿ ದಂಡ ವಿಧಿಸಿದ ಯೂರೊಪ್

0
16

ಅಂತರ್ಜಾಲದ ಜಾಗತಿಕ ಸರ್ಚ್ ಎಂಜಿನ್ ಗೂಗಲ್​ಗೆ ಐರೋಪ್ಯ ಒಕ್ಕೂಟ ಆಘಾತ ನೀಡಿದೆ. ಆಂಡ್ರಾಯ್ಡ್ ಮೊಬೈಲ್ ಕ್ಷೇತ್ರದಲ್ಲಿ ಏಕಾಧಿಪತ್ಯ ಸ್ಥಾಪಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ 34 ಸಾವಿರ ಕೋಟಿ ರೂ. ದಂಡ ವಿಧಿಸಲಾಗಿದೆ.

ಬ್ರಸೆಲ್ಸ್: ಅಂತರ್ಜಾಲದ ಜಾಗತಿಕ ಸರ್ಚ್ ಎಂಜಿನ್ ಗೂಗಲ್​ಗೆ ಐರೋಪ್ಯ ಒಕ್ಕೂಟ ಆಘಾತ ನೀಡಿದೆ. ಆಂಡ್ರಾಯ್ಡ್  ಮೊಬೈಲ್ ಕ್ಷೇತ್ರದಲ್ಲಿ ಏಕಾಧಿಪತ್ಯ ಸ್ಥಾಪಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ 34 ಸಾವಿರ ಕೋಟಿ ರೂ. ದಂಡ ವಿಧಿಸಲಾಗಿದೆ.

ಗೂಗಲ್ ಆಪನ್ನು ಪ್ರಿ ಇನ್​ಸ್ಟಾಲ್ಡ್ ಆಗಿಸಲು ಹಾಗೂ ತನ್ನದೇ ವೆಬ್ ಬ್ರೌಸರನ್ನು ಬಳಸುವಂತೆ ಐರೋಪ್ಯ ಒಕ್ಕೂಟದಲ್ಲಿನ ಮೊಬೈಲ್ ತಯಾರಕ ಕಂಪನಿಗಳ ಮೇಲೆ ಗೂಗಲ್ ಒತ್ತಡ ಹೇರಿತ್ತು ಎಂಬ ವಿಚಾರ ತನಿಖೆಯಲ್ಲಿ ಸಾಬೀತಾದ ಕಾರಣ ದಂಡ ವಿಧಿಸಲಾಗಿದೆ. ಒಂದು ವೇಳೆ 90 ದಿನಗಳೊಳಗಾಗಿ ಈ ತಪ್ಪನ್ನು ಸರಿಪಡಿಸದಿದ್ದರೆ ಪ್ರತಿದಿನ ಒಟ್ಟು ಆದಾಯದ ಶೇ. 5ನ್ನು ದಂಡದ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ ಎಂದು ಐರೋಪ್ಯ ಒಕ್ಕೂಟ ಎಚ್ಚರಿಕೆ ನೀಡಿದೆ. 2017ರಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ಇಂಥದೇ ಪ್ರಕರಣದಲ್ಲಿ ಗೂಗಲ್​ಗೆ 19 ಸಾವಿರ ಕೋಟಿ ರೂ. ದಂಡ ವಿಧಿಸಲಾಗಿತ್ತು.