ಗಿರೀಶ್ ಕಾರ್ನಾಡ್ ಗೆ 2017ರ ಟಾಟಾ ಸಾಹಿತ್ಯ ಜೀವಮಾನ ಸಾಧನೆ ಪ್ರಶಸ್ತಿ

0
34

ಖ್ಯಾತ ಸಾಹಿತಿ, ನಿರ್ದೇಶಕ ಹಾಗೂ ನಟ ಗಿರೀಶ್ ಕಾರ್ನಾಡ್ ಅವರಿಗೆ 2017ರ ಟಾಟಾ ಸಾಹಿತ್ಯ ಜೀವಮಾನ ಸಾಧನೆ ಪ್ರಶಸ್ತಿ ಒಲಿದು ಬಂದಿದೆ.

ನಾಟಕ ರಚನೆಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 79 ವರ್ಷ ವಯಸ್ಸಿನ ಗಿರೀಶ್ ಕಾರ್ನಾಡ್ ಅವರಿಗೆ ನವೆಂಬರ್ 19ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಅಂದು  ನಡೆಯುವ ಸಾಹಿತ್ಯ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮುಂಬೈನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ ಕೇಂದ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
 
ಈ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿರುವ ಗಿರೀಶ್ ಕಾರ್ನಾಡ್ ಅವರು, ನಾಟಕ ರಚನೆಗಾಗಿ ಟಾಟಾ ಸಾಹಿತ್ಯ ಪ್ರಶಸ್ತಿ ಒಲಿದುಬಂದಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಹೇಳಿದ್ದಾರೆ.
 
1961ರಲ್ಲಿ ಯಯಾತಿ ನಾಟಕ ರಚನೆ ಮಾಡಿದ್ದ ಕಾರ್ನಾಡರು, ಬಳಿಕ 1964ರಲ್ಲಿ “ತುಘಲಕ್” ಬರೆದಿದ್ದರು. 1971ರಲ್ಲಿ ರಚನೆಯಾದ ಹಯವದನ ಕಾರ್ನಾಡರಿಗೆ ಸಾಕಷ್ಚು ಹೆಸರು ತಂದುಕೊಟ್ಟಿತು. 1988ರಲ್ಲಿ ಅವರು ಬರೆದಿದ್ದು  ನಾಗ-ಮಂಡಲ ಮತ್ತು 1990ರಲ್ಲಿ ಮೂಡಿಬಂದ “ತಲೆದಂಡ” ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಸಾಹಿತ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ನಾಡ್ ಅವರು, ಪದ್ಮಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿ  ಸ್ವೀಕರಿಸಿದ್ದಾರೆ.
 
ಕಾರ್ನಾಡರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ
ಇದೇ ವೇಳೆ ಕಾರ್ನಾಡರಿಗೆ ಟಾಟಾ ಸಾಹಿತ್ಯ ಪ್ರಶಸ್ತಿ ನೀಡುತ್ತಿರುವ ಕುರಿತು ಮಾತನಾಡಿದ ಟಾಟಾ ಲಿಟ್ ಸಂಸ್ಥಾಪಕ ನಿರ್ದೇಶಕ ಅನಿಲ್ ಧಾರ್ಕರ್ ಅವರು, ಖ್ಯಾತ ನಾಟಕ ರಚನೆಗಾರ ಹಾಗೂ ನಟ ಗಿರೀಶ್ ಕಾರ್ನಾಡ್ ಅವರಿಗೆ  ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಅವರ ನಾಟಕಗಳು ಹಾಗೂ ಚಿತ್ರಗಳು ಮುಂದಿನ ಪೀಳಿಗೆಗಳೂ ನೆನಪಿನಲ್ಲಿಟ್ಟುಕೊಳ್ಳಬೇಕಾದತಂಹವುಗಳಾಗಿವೆ. ಸಾಹಿತ್ಯ ಕ್ಷೇತ್ರಕ್ಕೆ ಅವರ  ಕೊಡುಗೆ ಅಪಾರ ಎಂದು ಹೇಳಿದ್ದಾರೆ.