ಗಾಳಿಯ ಗುಣಮಟ್ಟ ಸುಧಾರಿಸದ ಪಶ್ಚಿಮ ಬಂಗಾಳಕ್ಕೆ 5 ಕೋಟಿ ರೂ ದಂಡ

0
266

ಹೌರಾ ಹಾಗೂ ಕೋಲ್ಕತ್ತದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಎರಡು ವರ್ಷಗಳ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸಲು ವಿಫಲವಾಗಿದ್ದಕ್ಕಾಗಿ, ಪಶ್ಚಿಮ ಬಂಗಾಳಕ್ಕೆ ರಾಷ್ಟ್ರೀಯ ಹಸಿರು ಮಂಡಳಿ (ಎನ್‌ಜಿಟಿ) ₹5 ಕೋಟಿ ದಂಡ ವಿಧಿಸಿದೆ.

ಕೋಲ್ಕತ್ತ (ಪಿಟಿಐ): ಹೌರಾ ಹಾಗೂ ಕೋಲ್ಕತ್ತದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಎರಡು ವರ್ಷಗಳ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸಲು ವಿಫಲವಾಗಿದ್ದಕ್ಕಾಗಿ, ಪಶ್ಚಿಮ ಬಂಗಾಳಕ್ಕೆ ರಾಷ್ಟ್ರೀಯ ಹಸಿರು ಮಂಡಳಿ (ಎನ್‌ಜಿಟಿ) 5 ಕೋಟಿ ದಂಡ ವಿಧಿಸಿದೆ. 

ಆದೇಶ ಹೊರಡಿಸಿದ ಎರಡು ವಾರಗಳ ಒಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ದಂಡ ಪಾವತಿಸಬೇಕು ಎಂದು ನ್ಯಾಯಮೂರ್ತಿ ಎಸ್‌.‍ಪಿ.ವಾಂಗ್ಡಿ ಹಾಗೂ ನ್ಯಾಯಾಂಗೇತರ ಸದಸ್ಯರಾದ ನಾಗಿನ್ ನಂದಾ ಅವರನ್ನೊಳಗೊಂಡ ಎನ್‌ಜಿಟಿ ಪೂರ್ವ ವಲಯದ ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿದೆ.

ಒಂದು ವೇಳೆ ಸರ್ಕಾರ ದಂಡ ಪಾವತಿಸಲು ವಿಫಲವಾದಲ್ಲಿ ಸಿಪಿಸಿಬಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 1 ಕೋಟಿ ದಂಡ ಪಾವತಿಸಬೇಕು ಎಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.  2016ರಲ್ಲಿ ನೀಡಿದ್ದ ಸೂಚನೆಯಲ್ಲಿ, ಗಾಳಿಯ