ಗಾಯಕಿ ಎಂ.ಡಿ ಪಲ್ಲವಿ ಸೇರಿ ರಾಜ್ಯದ ನಾಲ್ವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ

0
36

ಸುಗಮ ಸಂಗೀತ ಗಾಯಕಿ ಎಂ ಡಿ ಪಲ್ಲವಿ ಬಿಸ್ಮಿಲ್ಲಾ ಖಾನ್‌ ಯುವ ಪುಸ್ಕಾರಕ್ಕೆ ಆಯ್ಕೆಯಾಗಿದ್ದರೆ, ರಾಜ್ಯದ ಮೂವರು ಕಲಾವಿದರಿಗೆ 2018ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ.

ನವದೆಹಲಿ: ಸುಗಮ ಸಂಗೀತ ಗಾಯಕಿ ಎಂ ಡಿ ಪಲ್ಲವಿ ಬಿಸ್ಮಿಲ್ಲಾ ಖಾನ್‌ ಯುವ ಪುಸ್ಕಾರಕ್ಕೆ ಆಯ್ಕೆಯಾಗಿದ್ದರೆ, ರಾಜ್ಯದ ಮೂವರು ಕಲಾವಿದರಿಗೆ 2018ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ.

ಗೊಂಬೆಯಾಟದ ಕಲಾವಿದೆ ಅನುಪಮಾ ಹೊಸಕೆರೆ, ರಂಗ ನಿರ್ದೇಶಕ ಎಸ್‌ ರಘುನಂದನ್‌ ಹಾಗೂ ಭರತನಾಟ್ಯ ಕಲಾವಿದೆ ರಾಧಾ ಶ್ರೀಧರ್‌ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಂಗೀತ, ನಾಟಕ, ಜಾನಪದ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 44 ಮಂದಿಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, 1 ಲಕ್ಷ ನಗದು ಮತ್ತು ತಾಮ್ರಪತ್ರವನ್ನು ಪ್ರಶಸ್ತಿಯು ಒಳಗೊಂಡಿದೆ. ಅಕಾಡೆಮಿ ರತ್ನ ಪ್ರಶಸ್ತಿಯು 3 ಲಕ್ಷ ನಗದನ್ನು ಒಳಗೊಂಡಿರುತ್ತದೆ. ಅಕಾಡೆಮಿ ಪ್ರಶಸ್ತಿಗಳನ್ನು ರಾಷ್ಟ್ರಪತಿ ಮತ್ತು ಯುವ ಪ್ರಶಸ್ತಿಗಳನ್ನು ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ.

ಸಂಗೀತ ನಾಟಕ ಅಕಾಡೆಮಿಯು ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿನ ನಾಲ್ವರು ಪ್ರಖ್ಯಾತ ವ್ಯಕ್ತಿಗಳನ್ನು ಹೆಸರಿಸಿದ್ದು, ತಬಲಾ ವರ್ಚುಸೊದಲ್ಲಿ ಝಾಕಿರ್‌ ಹುಸೇನ್‌, ನೃತ್ಯಗಾರ್ತಿ ಸೋನಲ್‌ ಮಾನ್ಸಿಂಗ್, ನೃತ್ಯಗಾರ ಮತ್ತು ನೃತ್ಯ ಸಂಯೋಜಕ ಜತಿನ್ ಗೋಸ್ವಾಮಿ ಮತ್ತು ಭರತನಾಟ್ಯದ ಕೆ.ಕಲ್ಯಾಣಸುಂದರಂ ಪಿಳ್ಳೈ ಅವರನ್ನು ಪ್ರತಿಷ್ಠಿತ ಅಕಾಡೆಮಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜೂ. 26ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದಿದ್ದ ಅಕಾಡೆಮಿಯ ಆಯ್ಕೆ ಮಂಡಳಿಯ ಸಭೆಯಲ್ಲಿ ಹೆಸರುಗಳನ್ನು ಸೂಚಿಸಲಾಗಿದೆ. ಅಕಾಡೆಮಿಯ ರತ್ನ ಪ್ರಶಸ್ತಿಯು ಅತ್ಯಂತ ಪ್ರತಿಷ್ಟಿತ ಮತ್ತು ಅಪರೂಪದ ಗೌರವವಾಗಿದ್ದು, ಕೇವಲ 40 ಜನರಿಗೆ ಇದನ್ನು ಸೀಮಿತಗೊಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.

ಸಾಮಾನ್ಯ ಮಂಡಳಿಯು ಸಂಗೀತ, ನೃತ್ಯ, ನಾಟಕ, ಸಾಂಪ್ರದಾಯಿಕ/ಜಾನಪದ/ಬುಡಕಟ್ಟು ಸಂಗೀತ/ನೃತ್ಯ/ನಾಟಕ, ತೊಗಲುಗೊಂಬೆ ಮತ್ತು ಪ್ರದರ್ಶನ ಕಲೆಗಳಲ್ಲಿ ಒಟ್ಟಾರೆ ಕೊಡುಗೆ/ವಿದ್ಯಾರ್ಥಿ ವೇತನದ ಮೂರು ಜಂಟಿ ಪ್ರಶಸ್ತಿ ಸೇರಿದಂತೆ 44 ಕಲಾವಿದರನ್ನು 2018 ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಸಂಗೀತ ಕ್ಷೇತ್ರದಲ್ಲಿ ಹಿಂದುಸ್ತಾನಿ ಸಂಗೀತದಲ್ಲಿ ಮಣಿ ಪ್ರಸಾದ್‌, ಮಧುಪ್‌ ಮುದ್ಗಲ್‌, ಹಿಂದುಸ್ತಾನಿ ಸಾಧನ ಸಂತೂರ್‌ನಲ್ಲಿ ತರುಣ್‌ ಭಟ್ಟಾಚಾರ್ಯ, ಸರೋದ್‌ನಲ್ಲಿ ನಾರಾಯಣ್‌ ಮಜುಮ್ದಾರ್‌, ಕರ್ನಾಟಿಕ್‌ ಸಂಗೀತದಲ್ಲಿ ಅಲಮೇಲು ಮಣಿ, ಮಲ್ಲಾಡಿ ಸುರಿಬಾಬು, ಎಸ್‌ ಕಾಸಿಮ್‌ ಮತ್ತು ಎಸ್‌ ಬಾಬು ಅವರಿಗೆ ಜಂಟಿ ಪ್ರಶಸ್ತಿ, ನಾಗಸ್ವರಂಗೆ ಗಣೇಶ್‌ ಮ್ತತು ಕಮರೇಶ್‌, ವೈಯಲಿನ್‌ ಸುರೇಶ್‌ ವಾಡ್ಕರ್‌. ಸಂಗೀತದ ಇತರೇ ಸಾಂಪ್ರದಾಯಿಕ ಪ್ರಕಾರಗಳಾದ ಸುಗಮ ಸಂಗೀತದಲ್ಲಿ ಶಾಂತಿ ಹೀರಾನಂದ್‌, ಎಚ್‌ ಅಶಾಂಗ್ಬಿ ದೇವಿಗೆ ಇತರೆ ಪ್ರಮುಖ ಪ್ರಕಾರಗಳ ಮಣಿಪುರದ ನಟ ಸಂಕೀರ್ತನದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನೃತ್ಯ ವಿಭಾಗದಲ್ಲಿ 9 ಜನರಿಗೆ ಪ್ರಶಸ್ತಿ

ಭರತನಾಟ್ಯಂಗೆ ರಾಧಾ ಶ್ರೀಧರ್‌, ಕಥಕ್‌ನಲ್ಲಿ ಇಶಿರಾ ಮತ್ತು ಮೌಲಿಕ್‌ ಶಾಗೆ ಜಂಟಿ ಪ್ರಶಸ್ತಿ, ಮಣಿಪುರಿಗೆ ಅಶಮ್‌ ಲಕ್ಷ್ಮಿದೇವಿ, ಕುಚಿಪುಡಿಯಲ್ಲಿ ರಾಮಲಿಂಗಾ ಶಾಸ್ತ್ರಿ, ಒಡಿಸ್ಸಿಯಲ್ಲಿ ಸುರುಪ ಸೇನ್‌, ಸಾತ್ರಿಯಾದಲ್ಲಿ ತಂಕೇಶ್ವರ್‌ ಹಜಾರಿಕಾ ಬಾರ್ಬೇಯನ್‌, ಮೊಹಿನಿತ್ತಮ್‌ನಲ್ಲಿ ಗೋಪಿಕಾ ವರ್ಮಾ, ಚೌ ನೃತ್ಯಕ್ಕೆ ತಾಪನ್‌ ಕುಮಾರ್‌, ಕಂಟೆಂಪರರಿ ನೃತ್ಯಕ್ಕೆ ದೀಪಕ್‌ ಮಜುಮ್ದಾರ್‌ಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಲಭ್ಯವಾಗಿದೆ.

ಸಾಂಪ್ರದಾಯಿಕ/ಜಾನಪದ/ಬುಡಕಟ್ಟು ಸಂಗೀತ/ನೃತ್ಯ/ನಾಟಕ ಮತ್ತು ತೊಗಲುಬೊಂಬೆಯಲ್ಲಿ 10 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜನಪದ ಸಂಗೀತಕ್ಕೆ ಆಂಧ್ರಪ್ರದೇಶದ ಮಾಲಿನಿ ಅಶ್ವತಿ, ರಾಜಸ್ತಾನದ ಗಾಜಿ ಖಾನ್‌ ಬರ್ನಾ, ನರೇಂದ್ರ ಸಿಂಗ್‌, ಉತ್ತರಾಖಂಡ್‌ನ ನೇಗಿ, ಜನಪದ ನಾಟಕದಲ್ಲಿ ಸಾದಿಕ್‌ ಭಾಗತ್‌, ಹರಿಕಥೆಗೆ ಕೋಟಾ ಸಚ್ಚಿದಾನಂದ ಶಾಸ್ತ್ರಿ, ತೊಗಲುಬೊಂಬೆಯಾಟಕ್ಕೆ ಕರ್ನಾಟಕದ ಅನುಪಮಾ ಹೊಸಕೆರೆ, ಹೇಮಚಂದ್ರ ಗೋಸ್ವಾಮಿಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರದರ್ಶನ ಕ್ಷೇತ್ರಕ್ಕೆ ಒಟ್ಟಾರೆ ಕೊಡುಗೆ ದಿವಾನ್‌ ಸಿಂಗ್ ಬಜೇಲಿ ಮತ್ತು ಪುರು ದಾದಿಚ್‌ ಆಯ್ಕೆಯಾಗಿದ್ದಾರೆ. ಅಕಾಡೆಮಿ ಪ್ರಶಸ್ತಿಯ ಗೌರವವನ್ನು 1952 ರಿಂದ ನೀಡುತ್ತಾ ಬರುತ್ತಿದ್ದು, ಈ ಗೌರವಗಳು ಅತ್ಯುನ್ನತ ಗುಣಮಟ್ಟದ ಶ್ರೇಷ್ಠತೆ ಮತ್ತು ಸಾಧನೆಗಳನ್ನು ಸಂಕೇತಿಸುವುದಲ್ಲದೆ ಉನ್ನತ ಸಾಧನೆ ಮಾಡಲು ಕಲಾವಿದರನ್ನು ಪ್ರೇರೇಪಿಸುತ್ತವೆ. (ಏಜೆನ್ಸೀಸ್)