“ಗನ್”​ಗೂ ವಿಶಿಷ್ಟ ಗುರುತಿನ ಸಂಖ್ಯೆ: ಗೃಹ ಸಚಿವಾಲಯ

0
36

ಈಗಾಗಲೇ ಪರವಾನಗಿ ಪಡೆದ ಶಸ್ತ್ರ ಹೊಂದಿದವರು ಮತ್ತು ಹೊಸದಾಗಿ ಪರವಾನಗಿ ಪಡೆಯುತ್ತಿರುವವರ ರಾಷ್ಟ್ರೀಯ ದತ್ತಾಂಶ ಸಂಗ್ರಹ (ಡೇಟಾಬೇಸ್) ಮುಂದಿನ ವರ್ಷ ಏಪ್ರಿಲ್​ಗೆ ಸಿದ್ಧವಾಗಲಿದೆ. ಜತೆಗೆ ಎಲ್ಲ ಗನ್​ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಐಎನ್) ನೀಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ನವದೆಹಲಿ: ಈಗಾಗಲೇ ಪರವಾನಗಿ ಪಡೆದ ಶಸ್ತ್ರ ಹೊಂದಿದವರು ಮತ್ತು ಹೊಸದಾಗಿ ಪರವಾನಗಿ ಪಡೆಯುತ್ತಿರುವವರ ರಾಷ್ಟ್ರೀಯ ದತ್ತಾಂಶ ಸಂಗ್ರಹ (ಡೇಟಾಬೇಸ್) ಮುಂದಿನ ವರ್ಷ ಏಪ್ರಿಲ್​ಗೆ ಸಿದ್ಧವಾಗಲಿದೆ. ಜತೆಗೆ ಎಲ್ಲ ಗನ್​ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಐಎನ್) ನೀಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಅಧಿಕೃತ ಗನ್ ಪರವಾನಗಿ ಹೊಂದಿದವರ ವಿವರ ಒಂದೇ ಕಡೆ ಸಿಗಲಿದೆ. ಗನ್ ಪರವಾನಗಿ ಪಡೆದವರು ಸಮಾರಂಭಗಳಲ್ಲಿ ಸಂಭ್ರಮಕ್ಕಾಗಿ ಹಾರಿಸಿದ ಗುಂಡುಗಳಿಂದ ಆಗುವ ಅಪಘಾತ ಹಾಗೂ ವಿವಿಧ ರೀತಿಯ ಅಪರಾಧಗಳಲ್ಲಿ ಅವರು ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಹಾಗಾಗಿ ಅಧಿಕೃತ ಗನ್​ಗಳಿಗೆ ಯುಐಎನ್ ನೀಡಲಾಗುವುದು. ಬಹುಶಸ್ತ್ರಗಳನ್ನು ಹೊಂದಿರುವವರು

ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಪರವಾನಗಿಗೆ ಅರ್ಜಿ ಸಲ್ಲಿಸಿ ಯುಐಎನ್ ಪಡೆಯುವುದು ಕೂಡ ಕಡ್ಡಾಯವಾಗಿದೆ. ನೂತನ ಕ್ರಮಕ್ಕಾಗಿ 1959ರ ಶಸ್ತ್ರಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ದೇಶದಲ್ಲಿರುವ ಗನ್​ಗಳ ಸಂಖ್ಯೆ: 2016ರ ಡಿಸೆಂಬರ್ 31ರವರೆಗೆ ದೇಶದಲ್ಲಿ 33.69 ಲಕ್ಷ ಮಂದಿ ಗನ್ ಪರವಾನಗಿ ಹೊಂದಿದ್ದರು. ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಂದರೆ 12.77 ಲಕ್ಷ ಮಂದಿಗೆ ಗನ್ ಪರವಾನಗಿ ನೀಡಲಾಗಿತ್ತು. ಜಮ್ಮು- ಕಾಶ್ಮೀರದಲ್ಲಿ 3.69 ಲಕ್ಷ ಮಂದಿ ಹಾಗೂ ಪಂಜಾಬ್​ನಲ್ಲಿ 3.59 ಲಕ್ಷ ಮಂದಿ ಬಳಿ ಅಧಿಕೃತವಾದ ಗನ್ ಇತ್ತು. ಕರ್ನಾಟಕದಲ್ಲಿ 1.13 ಲಕ್ಷ ಜನರು ಗನ್ ಪರವಾನಗಿ ಹೊಂದಿದ್ದರು. -ಪಿಟಿಐ