ಗಣರಾಜ್ಯೋತ್ಸವಕ್ಕಾಗಿ ದೆಹಲಿ ವಾಯು ಪ್ರದೇಶ ಬಂದ್

0
16

ಗಣರಾಜ್ಯೋತ್ಸವ ಪರೇಡ್ ಹಿನ್ನೆಲೆಯಲ್ಲಿ ಸುಮಾರು ಒಂದು ವಾರಗಳ ಕಾಲ ನಿತ್ಯ ಎರಡು ಗಂಟೆಗಳ ಕಾಲ ರಾಷ್ಟ್ರ ರಾಜಧಾನಿ ದೆಹಲಿ ವಾಯು ಪ್ರದೇಶವನ್ನು ಬಂದ್ ಮಾಡಲಾಗುತ್ತಿದ್ದು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಆಗಮಿಸುವ ಸುಮಾರು 1000 ವಿಮಾನಗಳನ್ನು ರದ್ದುಪಡಿಸುವ ಅಥವಾ ಸಮಯ ಬದಲಿಸಲಾಗುತ್ತಿದೆ.

ಗಣರಾಜ್ಯೋತ್ಸವ ಪರೇಡ್ ಗಾಗಿ ನಿರ್ಬಂಧ ವಿಧಿಸಿರುವುದರಿಂದ ಸುಮಾರು 500 ದೇಶಿಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತಿದೆ ಮತ್ತು ಹಲವು ಅಂತರಾಷ್ಟ್ರೀಯ ವಿಮಾನಗಳ ಸಮಯವನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
 
ಜನವರಿ 26ರ ಗಣರಾಜ್ಯೋತ್ಸವ ಪರೇಡ್ ಗೆ ಅಭ್ಯಾಸ ನಡೆಯುತ್ತಿರುವ ನಿಮಿತ್ತ ದೆಹಲಿ ವಾಯು ಪ್ರದೇಶದ ವಾಣಿಜ್ಯ ಬಳಕೆಯನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.
 
ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ವಿಮಾನ ನಿಲ್ದಾಣಗಳಿಗೂ ನೋಟಿಸ್ ಜಾರಿ ಮಾಡಿದ್ದು, ದೆಹಲಿಯಲ್ಲಿ ಜನವರಿ 18ರಿಂದ 26ರ ವರೆಗೆ 9 ದಿನಗಳ ಕಾಲ ಬೆಳಗ್ಗೆ 10.35ರಿಂದ 12.15ರ ವರೆಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನ ಟೇಕಾಫ್ ಅಥವಾ ಲ್ಯಾಂಡಿಂಗ್ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ.