ಗಡಿ ರಕ್ಷಣೆಯಾಯ್ತು, ಈಗ ಗಂಗೆ ರಕ್ಷಣೆಗೆ ಮುಂದಾದ ಮಾಜಿ ಯೋಧರು!

0
27

ಮಾಜಿ ಸೈನಿಕರು ತಮ್ಮ ಜೀವನದ ಪ್ರಮುಖ ಘಟ್ಟವನ್ನು ದೇಶದ ಗಡಿ ಕಾಯುವುದರಲ್ಲಿ ಕಳೆದಿದ್ದರು. ಸೈನಿಕ ಸೇವೆಯಿಂದ ನಿವೃತ್ತಿಯಾಗಿರುವ ಅವರೀಗ ವಿಶ್ರಾಂತ ಜೀವನವನ್ನು ಅನುಭವಿಸುತ್ತ ಹಾಯಾಗಿ ಕಾಲ ಕಳೆಯುತ್ತಿಲ್ಲ. ಬದಲಾಗಿ ಪವಿತ್ರ ನದಿ ಗಂಗಾ ರಕ್ಷಣೆ ಕೈಂಕರ್ಯಕ್ಕೆ ಟೊಂಕ ಕಟ್ಟಿದ್ದಾರೆ. ಈ ಮೂಲಕ ತಮ್ಮ ತನು ಮನ ಸದಾ ದೇಶ ಸೇವೆಗೆ ಮೀಸಲು ಎಂಬ ಸಂದೇಶ ಸಾರುತ್ತಿದ್ದಾರೆ.

ಹೊಸದಿಲ್ಲಿ: ಅವರು ತಮ್ಮ ಜೀವನದ ಪ್ರಮುಖ ಘಟ್ಟವನ್ನು ದೇಶದ ಗಡಿ ಕಾಯುವುದರಲ್ಲಿ ಕಳೆದಿದ್ದರು. ಸೈನಿಕ ಸೇವೆಯಿಂದ ನಿವೃತ್ತಿಯಾಗಿರುವ ಅವರೀಗ ವಿಶ್ರಾಂತ ಜೀವನವನ್ನು ಅನುಭವಿಸುತ್ತ ಹಾಯಾಗಿ ಕಾಲ ಕಳೆಯುತ್ತಿಲ್ಲ. ಬದಲಾಗಿ ಪವಿತ್ರ ನದಿ ಗಂಗಾ ರಕ್ಷಣೆ ಕೈಂಕರ್ಯಕ್ಕೆ ಟೊಂಕ ಕಟ್ಟಿದ್ದಾರೆ. ಈ ಮೂಲಕ ತಮ್ಮ ತನು ಮನ ಸದಾ ದೇಶ ಸೇವೆಗೆ ಮೀಸಲು ಎಂಬ ಸಂದೇಶ ಸಾರುತ್ತಿದ್ದಾರೆ. 

ಗಂಗಾ ನದಿ ರಕ್ಷಣೆ ಉದ್ದೇಶದಿಂದ ಭಾರತೀಯ ಸೇನೆ, 9 ಅಧಿಕಾರಿಗಳು ಹಾಗೂ 29 ಜೆಸಿಒಗಳು ಸೇರಿದಂತೆ 532 ಮಾಜಿ ಸೈನಿಕರನ್ನೊಳಗೊಂಡ ‘ಗಂಗಾ ಟಾಸ್ಕ್ ಪೋರ್ಸ್’ ಹೆಸರಿನ ಬೆಟಾಲಿಯನ್‌ನ್ನು ರಚಿಸಿದೆ. ಗಂಗೆಯ ರಕ್ಷಣೆಗಾಗಿ ನಿಯೋಜನೆಗೊಳ್ಳಲಿರುವ ಈ ಮಾಜಿ ಯೋಧರು ಅಲಹಾಬಾದ್, ವಾರಾಣಸಿ ಮತ್ತು ಕಾನ್ಪುರ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ದೇವನದಿಯ ರಕ್ಷಣೆ, ಸ್ವಚ್ಛತೆಯ ಹೊಣೆ ಹೊರಲಿರುವ ಇವರು, ಜನರು ನದಿಯಲ್ಲಿ ಕಸ ಎಸೆಯದಂತೆ ಎಚ್ಚರಿಸುವ ಕೆಲಸವನ್ನು ಸಹ ಮಾಡಲಿದ್ದಾರೆ. ಸದ್ಯ 200 ಮಾಜಿ ಸೈನಿಕರಿಗೆ ಅಲಹಾಬಾದ್‌ನಲ್ಲಿ ತರಬೇತಿ ನೀಡಲಾಗುತ್ತಿದೆ. 

ಹೀಗೆ ನಿಯೋಜನೆಗೊಳ್ಳುವ ಯೋಧರು ‘ಗಂಗಾ ಟಾಸ್ಕ್ ಫೋರ್ಸ್’ನಲ್ಲಿ 3 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ‘ಎಂಥ ಕಠಿಣ ಸನ್ನಿವೇಶಗಳಲ್ಲಿ ಸಹ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿರುತ್ತಾರೆ ಎಂಬ ಕಾರಣಕ್ಕೆ ಸೈನಿಕರನ್ನು ಗಂಗಾ ರಕ್ಷಣೆ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ’ ಎಂದು ಸ್ವಚ್ಛ ಗಂಗಾ ರಾಷ್ಟ್ರೀಯ ಅಭಿಯಾನದ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ತಿಳಿಸಿದ್ದಾರೆ. 

ಸ್ವಚ್ಛ ಗಂಗಾ ಅಭಿಯಾನದಡಿಯಲ್ಲಿ ಜಿಲ್ಲಾ ಸಮಿತಿಗಳೊಂದಿಗೆ ಯೋಧರು ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ನಿಯೋಜನೆಗೊಂಡಿರುವ ಅಲಹಾಬಾದ್ ಟಾಸ್ಕ್ ಫೋರ್ಸ್ ಅಂದಾಜು ಒಂದು ಲಕ್ಷ ಸಸಿಗಳನ್ನೊಳಗೊಂಡ ನರ್ಸರಿಯನ್ನು ಅಭಿವೃದ್ಧಿ ಪಡಿದ್ದು, 15 ಲಕ್ಷ ಬೀಜದ ಚೆಂಡು (ಸೀಡ್ ಬಾಲ್‌) ಗಳನ್ನು ಸಿದ್ಧಪಡಿಸಿದೆ. ಯೋಧರ ನಿಯೋಜನೆ ಯಾತ್ರಾರ್ಥಿಗಳಲ್ಲಿ ಶಿಸ್ತು ತರುವುದರಲ್ಲಿ ಅನುಮಾನವಿಲ್ಲ, ಎನ್ನುವ ಮಿಶ್ರಾ ಬದಲಾವಣೆಯ ಭರವಸೆ ವ್ಯಕ್ತ ಪಡಿಸುತ್ತಾರೆ.