ಗಂಗೆಯ ಮೇಲೆ ದೇಶದ ಮೊದಲ ಬಹು ಮಾದರಿ ನಿಲ್ದಾಣ ಉದ್ಘಾಟನೆ

0
349

ಗಂಗಾ ನದಿ ಮೇಲೆ ದೇಶದ ಮೊದಲ ಬಹು ಮಾದರಿ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 12 ರ ಸೋಮವಾರ ಉದ್ಘಾಟಿಸಿದರು.

ವಾರಾಣಸಿ (ಪಿಟಿಐ): ಗಂಗಾ ನದಿ ಮೇಲೆ ದೇಶದ ಮೊದಲ ಬಹು ಮಾದರಿ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 12 ರ  ಸೋಮವಾರ ಉದ್ಘಾಟಿಸಿದರು. 

ಕೋಲ್ಕತ್ತದಿಂದ ಹಡಗಿನಲ್ಲಿ ಒಳನಾಡು ಜಲಮಾರ್ಗದ ಮೂಲಕ ಬಂದ ಕಂಟೈನರ್‌ ಅನ್ನು ತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ಇಳಿಸಿಕೊಳ್ಳುವ ಮೂಲಕ ಅವರು ಈ ನಿಲ್ದಾಣ ಕಾರ್ಯಾರಂಭಕ್ಕೆ ಅವರು ಚಾಲನೆ ನೀಡಿದರು. ಆಹಾರ ಮತ್ತು ಪಾನೀಯಗಳನ್ನು ಹೊತ್ತು ಕಳೆದ ಅಕ್ಟೋಬರ್‌ನಲ್ಲಿ ಈ ಹಡಗು ಕೋಲ್ಕತ್ತದಿಂದ ಹೊರಟಿತ್ತು. 

ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರವು ಜಲಮಾರ್ಗ ವಿಕಾಸ ಯೋಜನೆಯಡಿ ಈ ನಿಲ್ದಾಣವನ್ನು ನಿರ್ಮಾಣ ಮಾಡಿದೆ.

ವಿಶ್ವಬ್ಯಾಂಕ್‌ ನೆರವಿನಿಂದ ನಿರ್ಮಿಸಲಾಗುತ್ತಿರುವ ಬಹುಮಾದರಿಯ ನಾಲ್ಕು ನಿಲ್ದಾಣಗಳ ಪೈಕಿ, ಇದು ಮೊದಲನೆಯದಾಗಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹5,369 ಕೋಟಿಯಾಗಿದ್ದು, ವಿಶ್ವಬ್ಯಾಂಕ್‌ ಮತ್ತು ಕೇಂದ್ರಸರ್ಕಾರ ಸಮಾನವಾಗಿ ಇದನ್ನು ಭರಿಸಲಿವೆ. 

1,500ದಿಂದ 2,000 ಟನ್‌ನಷ್ಟು ತೂಕದ ಸರಕನ್ನು ಈ ವಾರಾಣಸಿ–ಹಲ್ದಿಯಾ ಜಲಮಾರ್ಗದಲ್ಲಿ ಸಾಗಿಸಬಹುದಾಗಿದೆ.