ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟ : ಜಿಮ್ನಾಸ್ಟಿಕ್ಸ್‌ ನಲ್ಲಿ ಐದು ‍ಪದಕ ಗೆದ್ದ ಬವಲೀನ್‌

0
468

ಅಮೋಘ ಕೌಶಲಗಳನ್ನು ತೋರಿದ ಜಮ್ಮು ಮತ್ತು ಕಾಶ್ಮೀರದ ಬವಲೀನ್‌ ಕೌರ್‌ ಅವರು 2019 ಜನೇವರಿ 11 ರ ಶುಕ್ರವಾರ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು.

ಪುಣೆ (ಪಿಟಿಐ): ಅಮೋಘ ಕೌಶಲಗಳನ್ನು ತೋರಿದ ಜಮ್ಮು ಮತ್ತು ಕಾಶ್ಮೀರದ ಬವಲೀನ್‌ ಕೌರ್‌ ಅವರು 2019 ಜನೇವರಿ 11 ರ ಶುಕ್ರವಾರ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು.

15ವರ್ಷ ವಯಸ್ಸಿನ ಬವಲೀನ್‌, ಮೂರು ಚಿನ್ನ ಮತ್ತು ಎರಡು ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದರು.

ಬಾಲ್‌ (12.35 ಪಾಯಿಂಟ್ಸ್‌), ರಿಬ್ಬನ್‌ (11.25 ಪಾ.), ಕ್ಲಬ್ಸ್‌ (13.30 ಪಾ.) ಮತ್ತು ಹೂಪ್‌ (11.40 ಪಾ.) ವಿಭಾಗಗಳಲ್ಲಿ ಬವಲೀನ್‌ ಪದಕಗಳನ್ನು ಗೆದ್ದರು. ಒಟ್ಟಾರೆ 43.40 ಪಾಯಿಂಟ್ಸ್‌ ಕಲೆಹಾಕಿದ ಅವರು ಆಲ್‌ ರೌಂಡ್‌ ವಿಭಾಗದ ಚಿನ್ನದ ಪದಕವನ್ನೂ ತಮ್ಮದಾಗಿಸಿಕೊಂಡರು.

‘ನಮ್ಮ ರಾಜ್ಯದಲ್ಲಿ ಜಿಮ್ನಾಸ್ಟಿಕ್ಸ್‌ಗೆ ಅಗತ್ಯವಿರುವ ಮೂಲ ಸೌಕರ್ಯಗಳಿಲ್ಲ. ಕೋಚ್‌ಗಳಾದ ಕೃಪಾಲಿ ಪಟೇಲ್ ಸಿಂಗ್‌ ಮತ್ತು ಎಸ್‌.ಪಿ.ಸಿಂಗ್‌ ಅವರು ಹೇಳಿಕೊಟ್ಟ ಕೌಶಲಗಳನ್ನು ಮೈಗೂಡಿಸಿಕೊಂಡು ಬಂದಿದ್ದೇನೆ. ಹೀಗಾಗಿ ಇಲ್ಲಿ ಪದಕದ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಬವಲೀನ್‌ ಹೇಳಿದ್ದಾರೆ.

ಜೆರೆಮಿಗೆ ಚಿನ್ನ: 17 ವರ್ಷದೊಳಗಿನವರ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಜೆರೆಮಿ ಲಾಲ್ರಿನುಂಗಾ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

67 ಕೆ.ಜಿ. ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂತು.