ಖೇಲೋ ಇಂಡಿಯಾ ಯೂತ್ ಗೇಮ್ಸ್: ಕರ್ನಾಟಕಕ್ಕೆ 4ನೇ ಸ್ಥಾನ

0
642

ಮೊದಲ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್​ನಲ್ಲಿ ಕರ್ನಾಟಕ ತಂಡ ಒಟ್ಟಾರೆ 4ನೇ ಸ್ಥಾನದೊಂದಿಗೆ ಕೂಟಕ್ಕೆ ವಿದಾಯ ಹೇಳಿದೆ. ಕರ್ನಾಟಕ ಕೂಟದಲ್ಲಿ ಒಟ್ಟು 77 ಪದಕಗಳ ಬೇಟೆಯಾಡಿತು.

ಪುಣೆ: ಮೊದಲ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್​ನಲ್ಲಿ ಕರ್ನಾಟಕ ತಂಡ ಒಟ್ಟಾರೆ 4ನೇ ಸ್ಥಾನದೊಂದಿಗೆ ಕೂಟಕ್ಕೆ ವಿದಾಯ ಹೇಳಿದೆ.

ಕರ್ನಾಟಕ ಕೂಟದಲ್ಲಿ ಒಟ್ಟು 77 ಪದಕಗಳ ಬೇಟೆಯಾಡಿತು. ಇದರಲ್ಲಿ 30 ಚಿನ್ನ, 28 ಬೆಳ್ಳಿ ಹಾಗೂ 19 ಕಂಚಿನ ಪದಕಗಳು ಒಳಗೊಂಡಿವೆ. ಕರ್ನಾಟಕದ ಈಜುಪಟುಗಳು ಅತ್ಯಧಿಕ ಸ್ವರ್ಣ ಪದಕ ಬಾಚಿರುವುದು ಗಮನಾರ್ಹ.

ಇನ್ನು ಆತಿಥೇಯ ಮಹಾರಾಷ್ಟ್ರ ಅತ್ಯಧಿಕ ಪದಕಗಳೊಂದಿಗೆ ಸಮಗ್ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಮಹಾರಾಷ್ಟ್ರ 85 ಚಿನ್ನ, 62 ಬೆಳ್ಳಿ ಹಾಗೂ 81 ಕಂಚು ಪದಕ ಒಳಗೊಂಡಂತೆ ಒಟ್ಟು 228 ಪದಕ ಮುಡಿಗೇರಿಸಿಕೊಂಡಿತು. ಹರಿಯಾಣ 62 ಚಿನ್ನ, 56 ಬೆಳ್ಳಿ 60 ಕಂಚು ಪದಕ ಸೇರಿದಂತೆ 178 ಪದಕಗಳೊಂದಿಗೆ ರನ್ನರ್ ಅಪ್ ಆಯಿತು. ದೆಹಲಿ 48 ಚಿನ್ನ , 57 ಬೆಳ್ಳಿ ಮತ್ತು 31 ಕಂಚು ಪದಕಗಳೊಂದಿಗೆ ಒಟ್ಟು 136 ಪದಕಗಳ ಬೇಟೆಯಾಡಿ 3ನೇ ಸ್ಥಾನ ಪಡೆಯಿತು.

ಶಾಲೆಯಲ್ಲಿ ಪ್ರತಿದಿನ 1 ಗಂಟೆ ಕ್ರೀಡಾವಧಿ?

ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಶೀಘ್ರ ದೇಶದ ಎಲ್ಲ ಶಾಲೆಯಲ್ಲಿ ಪ್ರತಿ ದಿನ ಒಂದು ಗಂಟೆಯ ಅವಧಿಯನ್ನು ಕ್ರೀಡೆಗಾಗಿ ಮೀಸಲಿರಿಸಲು ಸೂಚಿಸುವ ಯೋಜನೆಯಲ್ಲಿದೆ. ದೇಶದ ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಾಗಿ ಮಕ್ಕಳಿಗೆ ಪ್ರತಿದಿನ ಒಂದು ಗಂಟೆಯ ಅವಧಿಯನ್ನು ಕ್ರೀಡೆಗಾಗಿ ಮೀಸಲಿರಿಸುವಂತೆ ಹೇಳುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.