ಖುಷೂ ಸ್ಮಾರಕ ಪ್ರಶಸ್ತಿಗೆ ಡಾ.ರೈನಾ ಆಯ್ಕೆ

0
165

ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ಏಟ್ರಿ) ವತಿಯಿಂದ ನೀಡಲಾಗುವ ‘ಟಿ.ಎನ್‌.ಖುಷೂ’ ಸ್ಮಾರಕ ಪ್ರಶಸ್ತಿಗೆ ಶಿವ್‌ ನಾದರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ಎಸ್‌.ರೈನಾ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ಏಟ್ರಿ) ವತಿಯಿಂದ ನೀಡಲಾಗುವ ‘ಟಿ.ಎನ್‌.ಖುಷೂ’ ಸ್ಮಾರಕ ಪ್ರಶಸ್ತಿಗೆ ಶಿವ್‌ ನಾದರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ಎಸ್‌.ರೈನಾ ಆಯ್ಕೆಯಾಗಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಸತೀಶ್‌ ಧವನ್‌ ಸಭಾಂಗಣದಲ್ಲಿ ನ. 19ರ ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು 1 ಲಕ್ಷ ನಗದು ಒಳಗೊಂಡಿದೆ. ಸಾಮಾಜಿಕ ವ್ಯವಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಜ್ಞಾನ ವಿಕಾಸದ ಕ್ಷೇತ್ರಗಳಲ್ಲಿ ಡಾ.ರೈನಾ ಅಧ್ಯಯನ ನಡೆಸಿದ್ದಾರೆ. ಸುಸ್ಥಿರತೆ, ಸಮತೆಯ ಮೌಲ್ಯಗಳನ್ನು ಅವರ ಅಧ್ಯಯನ ಒಳಗೊಂಡಿದೆ. ಸದ್ಯ ಅವರು ಲಿಂಗ ತಾರತಮ್ಯ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.