ಖಾಸಗಿ ಎಫ್‌.ಎಂಗಳಿಗೂ ಸುದ್ದಿ ಪ್ರಸಾರಕ್ಕೆ ಅವಕಾಶ :ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ

0
359

ಖಾಸಗಿ ಎಫ್‌.ಎಂ ವಾಹಿನಿಗಳು ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.

ನವದೆಹಲಿ (ಪಿಟಿಐ): ಖಾಸಗಿ ಎಫ್‌.ಎಂ ವಾಹಿನಿಗಳು ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2019 ಜನೇವರಿ 8 ರ ಮಂಗಳವಾರ ಆದೇಶ ಹೊರಡಿಸಿದೆ. 

‘ಈ ಕ್ರಮದಿಂದ ಪ್ರಜೆಗಳಲ್ಲಿ ಜಾಗೃತಿ ಮೂಡಲಿದೆ. ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಬೇರೇನು ಬೇಕು? ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಬಲೀಕರಣಗೊಳಿಸಲು ಸಾಧ್ಯವಾಗಬೇಕು’ ಎಂದು ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ. 

‘ಖಾಸಗಿ ಎಫ್‌.ಎಂ ವಾಹಿನಿಗಳು ಆಕಾಶವಾಣಿಯ ಸುದ್ದಿಯನ್ನು ಯಥಾವತ್ತಾಗಿ ಬಳಸಬೇಕು. ಸುದ್ದಿ ಮಧ್ಯೆ ಪ್ರಸಾರವಾಗುವ ಜಾಹೀರಾತುಗಳನ್ನು ಸಹ ಎಫ್‌.ಎಂ ವಾಹಿನಿಗಳು ಬಳಸಿಕೊಳ್ಳಬೇಕು. ಸುದ್ದಿಯ ಮೂಲ ಆಕಾಶವಾಣಿ ಎಂದು ಉಲ್ಲೇಖಿಸಬೇಕು. ಪ್ರಾಯೋಗಿಕ ಅವಧಿಗೆ ಮೇ 31ರಿಂದ ಉಚಿತವಾಗಿ ಈ ಸೇವೆ ಲಭ್ಯವಾಗಲಿದೆ. ಆದರೆ ಈ ಅವಧಿಯಲ್ಲಿ ನಕ್ಸಲ್‌ಪೀಡಿತ ಪ್ರದೇಶಗಳು ಹಾಗೂ ಅಶಾಂತಿಯಿರುವ ಗಡಿಭಾಗಗಳಲ್ಲಿ ಸುದ್ದಿ ಪ್ರಸಾರ ಮಾಡಬಾರದು’ ಎಂದು ನಿಯಮ ವಿಧಿಸಲಾಗಿದೆ.

ಆಕಾಶವಾಣಿಯ ಸುದ್ದಿ ಪ್ರಸಾರ ಮಾಡಲು ಬಯಸುವ ಎಫ್‌.ಎಂ ವಾಹಿನಿಗಳು ಮೊದಲಿಗೆ ಆಕಾಶವಾಣಿಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.