ಕ್ಷಿಪಣಿ ಪರೀಕ್ಷೆ ಯಶಸ್ವಿ

0
652

ದೇಶಿಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪ್ರ ಪ್ರತಿಕ್ರಿಯೆಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ (ಕ್ಯೂಆರ್‌ಎಸ್‌ಎಎಂ) ಎರಡು ಕ್ಷಿಪಣಿಗಳ ಪರೀಕ್ಷೆಯನ್ನು ಫೆಬ್ರುವರಿ 26 ರ ಮಂಗಳವಾರ ಯಶಸ್ವಿಯಾಗಿ ನಡೆಸಲಾಯಿತು.

ಬಾಲಸೋರ್‌ (ಒಡಿಶಾ) (ಪಿಟಿಐ): ದೇಶಿಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪ್ರ ಪ್ರತಿಕ್ರಿಯೆಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ (ಕ್ಯೂಆರ್‌ಎಸ್‌ಎಎಂ) ಎರಡು ಕ್ಷಿಪಣಿಗಳ ಪರೀಕ್ಷೆಯನ್ನು ಫೆಬ್ರುವರಿ 26 ರ ಮಂಗಳವಾರ ಯಶಸ್ವಿಯಾಗಿ ನಡೆಸಲಾಯಿತು.

ಇಲ್ಲಿಗೆ ಸಮೀಪದ ಚಂಡಿಪುರದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿತು.

ಎರಡು ಕ್ಷಿಪಣಿಗಳನ್ನು ವಿಭಿನ್ನ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಲಾಯಿತು. 30 ಕಿಲೋ ಮೀಟರ್‌ ವ್ಯಾಪ್ತಿಯವರೆಗೆ ವಿಭಿನ್ನ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯವನ್ನು ಈ ಕ್ಷಿಪಣಿಗಳು ಹೊಂದಿವೆ.