ಕ್ಷಿಪಣಿ ನಾಶಕ ದೇಶೀಯ ನಿರ್ವಿುತ “ಇಂಫಾಲ್” ನೌಕೆ ಸನ್ನದ್ಧ

0
286

ನಿರ್ದೇಶಿತ ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ನಾಶಪಡಿಸಬಲ್ಲ ಸಂಪೂರ್ಣ ದೇಶೀಯ ನಿರ್ವಿುತ ‘ಇಂಫಾಲ್’ ನೌಕೆ ಏಪ್ರೀಲ್ 20 ರ ಶನಿವಾರ ಮಝುಗಾಂವ್ ಡಾಕ್ ಶಿಪ್​ಬಿಲ್ಡರ್ಸ್ ನಲ್ಲಿ ನೀರಿಗೆ ಇಳಿಯಿತು.

ಮುಂಬೈ: ನಿರ್ದೇಶಿತ ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ನಾಶಪಡಿಸಬಲ್ಲ ಸಂಪೂರ್ಣ ದೇಶೀಯ ನಿರ್ವಿುತ ‘ಇಂಫಾಲ್’ ನೌಕೆ  ಏಪ್ರೀಲ್ 20 ರ ಶನಿವಾರ ಮಝುಗಾಂವ್ ಡಾಕ್ ಶಿಪ್​ಬಿಲ್ಡರ್ಸ್ ನಲ್ಲಿ ನೀರಿಗೆ ಇಳಿಯಿತು.

ಪ್ರಾಜೆಕ್ಟ್ 15ಬಿ ಅನ್ವಯ ನಿರ್ವಣಗೊಂಡಿರುವ ಮೂರನೇ ಹಡಗು ಇದಾಗಿದೆ. ಸಂಪ್ರದಾಯದಂತೆ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾನ್ಬಾ ಪತ್ನಿ ರೀನಾ  ಲಾನ್ಬಾ ತೆಂಗಿನಕಾಯಿ ಒಡೆದ ನಂತರ ಹಡಗನ್ನು ನೀರಿಗೆ ಇಳಿಸಲಾಗಿದ್ದು ವಿಶೇಷ. ಎರಡು ಬೃಹತ್ ಹೆಲಿಕಾಪ್ಟರ್​ಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಈ ಹಡಗು ಹೊಂದಿದೆ. 15ಬಿ ಅಡಿಯಲ್ಲಿ ನಿರ್ಮಾಣಗೊಂಡಿರುವ ಮೂರು ಯುದ್ಧನೌಕೆಗಳನ್ನು 2021 ರಿಂದ ಭಾರತೀಯ ನೌಕಾಪಡೆ ತನ್ನ ಕಾರ್ಯಾಚರಣೆಗಳಲ್ಲಿ ಬಳಕೆ ಮಾಡಲಿದೆ.

2015ರಲ್ಲಿ ಮೊದಲ ಹಡಗು: ಪ್ರಾಜೆಕ್ಟ್ 15ಬಿ ಅನ್ವಯ ನಿರ್ಮಾಣಗೊಂಡ  ಮೊದಲ ಕ್ಷಿಪಣಿ ನಾಶಕ ಹಡಗು ‘ವಿಶಾಖಪಟ್ಟಣಂ’ 2015ರ ಏಪ್ರೀಲ್. 20 ರಂದು ನೀರಿಗೆ ಇಳಿದಿತ್ತು. ‘ಮುರ್ವೆಗೋವಾ’ ಹೆಸರಿನ ಎರಡನೇ ಹಡಗನ್ನು 2016ರಲ್ಲಿ ನೀರಿಗೆ ಇಳಿಸಲಾಗಿತ್ತು.

ಪ್ರಾಜೆಕ್ಟ್ 15 ಬ್ರಾವೋ ಅಡಿಯಲ್ಲಿ ನಿರ್ವಿುತ ಎಲ್ಲ ಯುದ್ಧನೌಕೆಗಳು ನಾಲ್ಕು ಅನಿಲ ಚಾಲಿತ ಟರ್ಬೆನ್ ಹೊಂದಿದ್ದು, ಪ್ರತಿ ಗಂಟೆಗೆ 55 ಕಿ.ಮೀ. ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿವೆ. 163 ಮೀ. ಉದ್ದ ಇರುವ ಈ ನೌಕೆಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ ಸಾಮಗ್ರಿಗಳನ್ನು ಅಳವಡಿಕೆ ಮಾಡಲಾಗಿದೆ.