ಕ್ವಾಂಟಿಕೋ ವಿವಾದ: ಕ್ಷಮೆಯಾಚಿಸಿದ ಪ್ರಿಯಾಂಕಾ ಚೋಪ್ರಾ

0
19

‘ನನಗೆ ತುಂಬಾ ಬೇಸರವಾಗಿದೆ. ಕ್ವಾಂಟಿಕೋ ಎಪಿಸೋಡಿನಲ್ಲಿ ಆ ರೀತಿ ತೋರಿಸಿರುವುದು ಭಾರತೀಯರ ಮನಸ್ಸಿಗೆ ಘಾಸಿಯಾಗಿರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆ ಭಾವನೆ ಎಂದಿಗೂ ಬದಲಾಗಲ್ಲ’ ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟ್‌ ಮಾಡಿದ್ದಾರೆ.

ನವದೆಹಲಿ: ‘ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿಯರನ್ನು ಸಿಲುಕಿಸಲು ಭಾರತೀಯರು ಯತ್ನಿಸುತ್ತಿದ್ದಾರೆ’ ಎಂಬಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ‘ಕ್ವಾಂಟಿಕೋ’ ಸಂಚಿಕೆಯಲ್ಲಿ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೇಳಿದ್ದಾರೆ.

PRIYANKA

 

@priyankachopra

 
 

I’m extremely saddened and sorry that some sentiments have been hurt by a recent episode of Quantico. That was not and would never be my intention. I sincerely apologise. I’m a proud Indian and that will never change.

12:15 AM – Jun 10, 2018

 

ಈ ವಿಚಾರದ ಬಗ್ಗೆ ಪ್ರಿಯಾಂಕಾ ಕೊನೆಗೂ ಮೌನ ಮುರಿದಿದ್ದು ‘ನನಗೆ ತುಂಬಾ ಬೇಸರವಾಗಿದೆ. ಕ್ವಾಂಟಿಕೋ ಎಪಿಸೋಡಿನಲ್ಲಿ ಆ ರೀತಿ ತೋರಿಸಿರುವುದು ಭಾರತೀಯರ ಮನಸ್ಸಿಗೆ ಘಾಸಿಯಾಗಿರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆ ಭಾವನೆ ಎಂದಿಗೂ ಬದಲಾಗಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ವಿವಾದಿತ ಸಂಚಿಕೆ ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ಕೇಳಿಬಂದಿತ್ತು. ‘ಪ್ರಿಯಾಂಕಾ ಚೋಪ್ರಾ ಇಂಡಸ್ಟ್ರಿಗೆ ಹೊಸಬರಲ್ಲ. ಭಾರತೀಯಳಾಗಿ ಪ್ರಿಯಾಂಕಾ ಇದರಲ್ಲಿ ಒಪ್ಪಿದ್ದಾದರೂ ಹೇಗೆ? ಎಂದು ಪ್ರಶ್ನೆ ಕೇಳಿದ್ದರು. ಈ ವಿಚಾರ ವಿವಾದವಾಗುತ್ತಿದ್ದಂತೆ ಕ್ವಾಂಟಿಕೋ ನಿರ್ಮಾಣ ಸಂಸ್ಥೆ ಎಬಿಸಿ ಕೂಡ ಭಾರತೀಯರ ಕ್ಷಮೆಯಾಚಿಸಿತ್ತು. ‘ಈ ಸಂಚಿಕೆಯನ್ನು ಪ್ರಿಯಾಂಕ ನಿರ್ಮಿಸಿಲ್ಲ, ಅವರು ಕಥೆ  ಅಥವಾ ನಿರ್ದೇಶನ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿತ್ತು.