ಕ್ರೀಡೆಗೆ ಉತ್ತೇಜನ ನೀಡಲು ಗೋಪಿಚಂದ್‌ ಫೌಂಡೇಷನ್‌, ಕೋಟಕ್‌ ಮಹೀಂದ್ರ ಒಪ್ಪಂದ

0
418

ಭಾರತ ಬ್ಯಾಡ್ಮಿಂಟನ್‌ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್‌ ಈಗ ಮತ್ತೊಂದು ಇನಿಂಗ್ಸ್‌ ಆರಂಭಿಸಿದ್ದಾರೆ.
ಬ್ಯಾಡ್ಮಿಂಟನ್‌ ಕ್ರೀಡೆಯನ್ನು ದೇಶದಲ್ಲಿ ಇನ್ನಷ್ಟು ವಿಸ್ತಾರಗೊಳಿಸಲು ತಮ್ಮ ಫೌಂಡೇಷನ್‌ ಮೂಲಕ ಗೋಪಿಚಂದ್‌ ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಹೈದರಾಬಾದ್‌: ಭಾರತ ಬ್ಯಾಡ್ಮಿಂಟನ್‌ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್‌  ಈಗ ಮತ್ತೊಂದು ಇನಿಂಗ್ಸ್‌ ಆರಂಭಿಸಿದ್ದಾರೆ.

ಬ್ಯಾಡ್ಮಿಂಟನ್‌ ಕ್ರೀಡೆಯನ್ನು ದೇಶದಲ್ಲಿ ಇನ್ನಷ್ಟು ವಿಸ್ತಾರಗೊಳಿಸಲು ತಮ್ಮ ಫೌಂಡೇಷನ್‌ ಮೂಲಕ ಗೋಪಿಚಂದ್‌ ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. 

ಈ ಯೋಜನೆಯಲ್ಲಿ ಪುಲ್ಲೇಲ ಗೋಪಿಚಂದ್‌ಗೆ ಸಾಥ್‌ ನೀಡಲು ಕೋಟಕ್‌ ಮಹೀಂದ್ರ ಕಂಪನಿ ಕೂಡ ಮುಂದಾಗಿದೆ. 

ಕ್ರೀಡೆಗಾಗಿ ಉತ್ತೇಜನ ಕ್ರಮಗಳನ್ನುಕೈಗೊಳ್ಳಲು ಕೋಟಕ್‌ ಮಹೀಂದ್ರ ಮತ್ತು ಪುಲ್ಲೇಲ ಗೋಪಿಚಂದ್‌ ಒಂದಾಗಿದ್ದಾರೆ. 

ಪುಲ್ಲೇಲ ಗೋಪಿಚಂದ್‌ ಬ್ಯಾಡ್ಮಿಂಟನ್‌ ಫೌಂಡೇಷನ್‌ ಮತ್ತು ಕೋಟಕ್ ಮಹೀಂದ್ರ ಇದಕ್ಕಾಗಿ ಒಪ್ಪಂದ ಮಾಡಿಕೊಂಡಿದೆ. 

ಆಧುನಿಕ ಗುಣಮಟ್ಟದ ಬ್ಯಾಡ್ಮಿಂಟನ್‌ ಕೋರ್ಟ್‌ಗಳನ್ನು, ಮೂಲ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಕೋಚ್‌ಗಳಿಂದಲೂ ತರಬೇತಿ ಕೊಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಪುಲ್ಲೇಲ ಗೋಪಿಚಂದ್‌, ನಮ್ಮ ಫೌಂಡೇಷನ್‌ನ ಮುಖ್ಯ ಧ್ಯೇಯ ಎಂದರೆ ಅತ್ಯುತ್ತಮ ಗುಣಮಟ್ಟದ ತರಬೇತಿ ಕೊಡಿಸುವುದು. ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲಾಗುವುದು. ಈಗ ಕೋಟಕ್‌ ಮಹೀಂದ್ರ ಜತೆ ಕೈ ಜೋಡಿಸಿರುವುದರಿಂದ ಈ ಯೋಜನೆಗಳನ್ನು ಸಾಕಾರಗೊಳ್ಳುವ ವಿಶ್ವಾಸವಿದೆ ಎಂದರು. 

ಸ್ಫೋಟ್ಸ್‌ ಸೈನ್ಸ್‌ ಸೆಂಟರ್‌ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಜಾಗತಿಕ ಮಟ್ಟದ ಸೌಕರ್ಯಗಳನ್ನು ನಮ್ಮ ಯುವ ಆಟಗಾರರಿಗೆ ಒದಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೋಪಿಚಂದ್‌ ತಿಳಿಸಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಕೋಟಕ್‌ ಮಹೀಂದ್ರ ಜಂಟಿ ವ್ಯವಸ್ಥೆ ನಿರ್ದೇಶಕ ದೀಪಕ್‌ ಗುಪ್ತಾ, ಬ್ಯಾಡ್ಮಿಂಟನ್‌ ತರಬೇತುದಾರ ಗೋಪಿಚಂದ್‌ ಈಗಾಗಲೇ ಕ್ರೀಡೆಗೆ ಸಾಕಷ್ಟು ಮಾಡಿದ್ದಾರೆ. ಅವರ ಯೋಜನೆಗಳನ್ನು ಸಾಕಾರಗೊಳಿಸಲು ನಾವು ಕೂಡ ಕೈ ಜೋಡಿಸಿದ್ದೇವೆ. ಕ್ರೀಡೆಗೆ ಮೊದಲಿನಿಂದಲೇ ಕೋಟಕ್‌ ಸಂಸ್ಥೆ ನೆರವು ನೀಡುತ್ತಿದೆ. ಮುಂದೆಯೂ ಇನ್ನುಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.