ಕ್ರೀಡಾ ಸಂಸ್ಥೆಯ ಶ್ರೀಮಂತ ಒಡೆಯ ಮುಖೇಶ್ ಅಂಬಾನಿ

0
403

ಕ್ರೀಡಾ ತಂಡಗಳ ಮಾಲೀಕತ್ವ ಹೊಂದಿರುವ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಯಲ್ಲಿ ಮುಂಬೈ ಇಂಡಿಯನ್ಸ್‌ ಮಾಲೀಕ ಮುಕೇಶ್ ಅಂಬಾನಿ ಅಗ್ರಸ್ಥಾನ ಗಳಿಸಿದ್ದಾರೆ.

ಮುಂಬೈ: ಕ್ರೀಡಾ ತಂಡಗಳ ಮಾಲೀಕತ್ವ ಹೊಂದಿರುವ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಯಲ್ಲಿ ಮುಂಬೈ ಇಂಡಿಯನ್ಸ್‌ ಮಾಲೀಕ ಮುಕೇಶ್ ಅಂಬಾನಿ ಅಗ್ರಸ್ಥಾನ ಗಳಿಸಿದ್ದಾರೆ. 

ಫೋರ್ಬ್ಸ್‌ ನಿಯತಕಾಲಿಕೆಯು ಬಿಡುಗಡೆ ಮಾಡಿರುವ 20 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಕೇಶ್ 13ನೇ ಸ್ಥಾನ ಗಳಿಸಿದ್ದರು.

ಅವರ ಸಂ‍ಪತ್ತು ಈಗ  3.5 ಲಕ್ಷ ಕೋಟಿಗೆ ವೃದ್ಧಿಯಾಗಿದೆ. ಇಂಡಿಯನ್ ಪ್ರೀಮಿ ಯರ್ ಲೀಗ್‌ನಲ್ಲಿ  ಆಡುವ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಅವರೇ ಮಾಲೀಕ.

ವಿಶ್ವದ 58 ಪ್ರಮುಖ ಉದ್ಯಮಿಗಳು ವಿವಿಧ ಕ್ರೀಡೆಗಳಲ್ಲಿ ಆಡುವ 70 ಪ್ರಮುಖ ತಂಡಗಳಲ್ಲಿ ಮಾಲೀಕತ್ವ ಅಥವಾ ಹೆಚ್ಚಿನ ಪ್ರಮಾಣದ ಪಾಲು ಬಂಡವಾಳ ಹೊಂದಿದ್ದಾರೆ.