ಕ್ರಿಕೆಟ್ ವೃತ್ತಿ ಜೀವನಕ್ಕೆ ಇಂಗ್ಲೆಂಡ್ ಆಲ್‍ರೌಂಡರ್ ಜೆನ್ನಿ ಗನ್ ವಿದಾಯ

0
4

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಜೆನ್ನಿ ಗನ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಜೆನ್ನಿ ಗನ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಇಂಗ್ಲೆಂಡ್ ಪರ ಅತಿ ಹೆಚ್ಚು ಟಿ-20 ಪಂದ್ಯಗಳಾಡಿರುವ ಆಟಗಾರ್ತಿ ಎಂಬ ಗೌರವ ಜೆನ್ನಿ ಗನ್ ಅವರಿಗಿದೆ. ದೇಶದ ಪರ 259 ಪಂದ್ಯಗಳಾಡಿದ್ದಾರೆ. ಮೂರು ಬಾರಿ ವಿಶ್ವಕಪ್ ಜಯ ಹಾಗೂ ಐದು ಆಷಸ್ ಸರಣಿ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಗನ್ ಇದ್ದರು.

ಚಾರ್ಲೊಟ್ ಎಡ್ವಾಡ್ರ್ಸ್ (309) ಇಂಗ್ಲೆಂಡ್ ಪರ ಅತಿ ಹೆಚ್ಚು ಪಂದ್ಯಗಳಾಡಿದ್ದು. ಇವರ ಬಳಿಕ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಜೆನ್ನಿ ಗನ್ ಎರಡನೇ ಸ್ಥಾನದಲ್ಲಿದ್ದಾರೆ.
 
ಜೆನ್ನಿ ಗನ್ ಅವರು 11 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿ 645 ರನ್, 144 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ 3822 ರನ್, 108 ಟ್ವೆಂಟಿ-20 ಪಂದ್ಯಗಳನ್ನು ಆಡಿ 1487 ರನ್ ಬಾರಿಸಿದ್ದಾರೆ.