ಕ್ರಿಕೆಟ್‌: ಮುನಾಫ್ ಪಟೇಲ್ ನಿವೃತ್ತಿ

0
252

ಭಾರತ ತಂಡದ ವೇಗದ ಬೌಲರ್‌ ಮುನಾಫ್ ಪಟೇಲ್‌ ಅವರು ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ವೆಬ್‌ಸೈಟ್‌ಗಳು ಈ ವಿಷಯವನ್ನು ಪ್ರಕಟಿಸಿವೆ. 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಅವರು ಆಡಿದ್ದರು.

ಬೆಂಗಳೂರು: ಭಾರತ ತಂಡದ ವೇಗದ ಬೌಲರ್‌ ಮುನಾಫ್ ಪಟೇಲ್‌ ಅವರು ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ವೆಬ್‌ಸೈಟ್‌ಗಳು ಈ ವಿಷಯವನ್ನು ಪ್ರಕಟಿಸಿವೆ. 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಅವರು ಆಡಿದ್ದರು.

2006ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮುನಾಫ್‌ಗೆ ಈಗ 35 ವರ್ಷ. ಒಟ್ಟು 13 ಟೆಸ್ಟ್‌, 70 ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ಅವರು ಆಡಿದ್ದಾರೆ. ಒಟ್ಟು 125 ವಿಕೆಟ್ ಕಬಳಿಸಿದ್ದಾರೆ.

ಗುಜರಾತ್‌ನ ಇಕ್‌ಹಾರ್‌ನಲ್ಲಿ ಜನಿಸಿದ ಮುನಾಫ್‌ ದೇಶಿ ಕ್ರಿಕೆಟ್‌ನಲ್ಲಿ ಮುಂಬೈ, ಮಹಾರಾಷ್ಟ್ರ, ಬರೋಡ ಮತ್ತು ಗುಜರಾತ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ರಾಜಸ್ಥಾನ ರಾಯಲ್ಸ್‌ ಮತ್ತು ಗುಜರಾತ್ ಲಯನ್ಸ್‌ ತಂಡಗಳಿಗಾಗಿ ಆಡಿದ್ದಾರೆ.